Nepal plane crash : ನೇಪಾಳ ವಿಮಾನ ದುರಂತ : 4 ಜನ ಸಿಬ್ಬಂದಿ, 68 ಪ್ರಯಾಣಿಕರ ದರ್ಮರಣ...!
ನೇಪಾಳದ ಪೊಖರಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 72 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಎಟಿಆರ್ 72 ವಿಮಾನವು ಭಾನುವಾರ ಬೆಳಗ್ಗೆ ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿದ್ದಾಗ ಪೊಖರಾದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 68 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು.
Nepal Plane Crash : ನೇಪಾಳದ ಪೊಖರಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 72 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಎಟಿಆರ್ 72 ವಿಮಾನವು ಭಾನುವಾರ ಬೆಳಗ್ಗೆ ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿದ್ದಾಗ ಪೊಖರಾದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 68 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು.
ಇಂದು ಬೆಳಗ್ಗೆ 10.33ಕ್ಕೆ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿತ್ತು. ಅಪಘಾತದಿಂದಾಗಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಲ್ಯಾಂಡ್ ಆಗುವ ಮುನ್ನವೇ ವಿಮಾನದಲ್ಲಿ ಜ್ವಾಲೆ ಕಾಣಿಸಿಕೊಂಡಿದೆ ಎಂಬ ವರದಿಗಳೂ ಸಹ ಬಂದಿವೆ.
10 ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಿದ 17 ರ ಹರೆಯದ ಬಾಲಕನ ಬಂಧನ
ವಿಮಾನ ಅಪಘಾತದ ತನಿಖೆಗಾಗಿ ನೇಪಾಳ ಸರ್ಕಾರವು ಐದು ಸದಸ್ಯರ ತನಿಖಾ ಆಯೋಗವನ್ನು ನೇಮಿಸಿದೆ. ದುರಂತದ ಹಿನ್ನೆಲೆಯಲ್ಲಿ ನೇಪಾಳವು ಸೋಮವಾರ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿತು. ಈ ವಿಮಾನವನ್ನು ನೇಪಾಳದಲ್ಲಿ ದೇಶೀಯ ಸೇವೆಗಾಗಿ ಬಳಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.