Watch Video: ನೇಪಾಳ ವಿಮಾನ ದುರಂತ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
Pokhara Plane Crash: ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭೀಕರ ಅಪಘಾತ ಸಂಭವಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Nepal Plane Crash Video: ನೇಪಾಳದ ಪೋಖರಾದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ವಿಮಾನ ಪತನದ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ವಿಮಾನ ಪತನವಾಗುವ ಮುನ್ನ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ರನ್‌ವೇ ತಲುಪುವ ಮುನ್ನವೇ ವಿಮಾನ ಪತನಗೊಂಡಿದೆ. ರನ್‌ವೇಗೆ ಕೆಲವೇ ಮೀಟರ್ ಅಂತರ ಇರುವಾಗಲೇ ವಿಮಾನ ಪತನಗೊಂಡಿದೆ. ಈ ವಿಡಿಯೋ ಆಘಾತಕಾರಿಯಾಗಿದೆ. ಈ ವೀಡಿಯೋದಲ್ಲಿ ದೂರದಿಂದ ಬರುತ್ತಿರುವ ವಿಮಾನವೊಂದು ವಾಲುತ್ತಿರುವುದನ್ನು ನೋಡಬಹುದು. ಈ ಅಪಘಾತದಲ್ಲಿ ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
Brain Stroke: ಕೊವಿಡ್ ವ್ಯಾಕ್ಸಿನ್ ನಿಂದ ಬ್ರೈನ್ ಸ್ಟ್ರೋಕ್ ಅಪಾಯ! ಹೊಸ ಅಧ್ಯಯನ ಹೇಳಿದ್ದೇನು?
ವಿಮಾನ ದುರಂತದ ಬಗ್ಗೆ ಪ್ರಧಾನಿ ಸಂತಾಪ
ಪೋಖರಾ ವಿಮಾನ ಅಪಘಾತದ ಕುರಿತು ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಸಂತಾಪ ವ್ಯಕ್ತಪಡಿಸಿದ್ದಾರೆ. 'ಕಠ್ಮಂಡುವಿನಿಂದ ಪೊಖರಾಗೆ ಪ್ರಯಾಣಿಕರೊಂದಿಗೆ ಹೋಗುತ್ತಿದ್ದ ಯೇತಿ ಏರ್‌ಲೈನ್ಸ್ ಎಎನ್‌ಸಿ ಎಟಿಆರ್ 72 ಅಪಘಾತದ ಸುದ್ದಿ ತಿಳಿದು ನಾನು ತೀವ್ರ ದುಃಖಿತನಾಗಿದ್ದೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. 'ನಾನು ಭದ್ರತಾ ಸಿಬ್ಬಂದಿಗೆ, ನೇಪಾಳ ಸರ್ಕಾರದ ಎಲ್ಲಾ ಏಜೆನ್ಸಿಗಳಿಗೆ ಮತ್ತು ಸಾರ್ವಜನಿಕರಿಗೆ ಸೂಕ್ತ ರಕ್ಷಣಾ ಕಾರ್ಯಾಚರಣೆ ನಡೆಸಲು ಸೂಚಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Good News: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ! ಕಾರಣ ಇಲ್ಲಿದೆ
ವಿಮಾನದಲ್ಲಿ 10 ವಿದೇಶಿ ಪ್ರಜೆಗಳಿದ್ದರು
ಇನ್ನೊಂದೆಡೆ ಘಟನೆಯ ಕುರಿತು ಮಾತನಾಡಿರುವ, ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್, ಅವಳಿ ಎಂಜಿನ್ ಎಟಿಆರ್ 72 ವಿಮಾನದಲ್ಲಿ 72 ಪ್ರಯಾಣಿಕರಿದ್ದರು ಎಂದು ಹೇಳಿದ್ದಾರೆ. ಇವರಲ್ಲಿ ಇಬ್ಬರು ನವಜಾತ ಶಿಶುಗಳು, 4 ಸಿಬ್ಬಂದಿ ಮತ್ತು 10 ವಿದೇಶಿ ಪ್ರಜೆಗಳು ಶಾಮೀಲಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ದ್ರಸ್ತುತ ರಕ್ಷಣಾ ತಂಡ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.