ಮೆದುಳಿನಲ್ಲಿಯೇ ಯಾವುದೇ ಹಾಡಿನ ಲೈವ್ ಸ್ಟ್ರೀಮಿಂಗ್ ಮಾಡಲು ಸಿದ್ಧವಾಗುತ್ತಿದೆ ಚಿಪ್, Elon Musk ಬಿಚ್ಚಿಟ್ಟ ರಹಸ್ಯ
ಎಲೋನ್ ಮಸ್ಕ್ ಕಂಪನಿಯು ನ್ಯೂರಾಲಿಂಕ್ ಹೆಸರಿನ ಬ್ರೈನ್ ಚಿಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಚಿಪ್ ಅನ್ನು ಮೂಲತಃ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲ ಬಾರಿಗೆ ಮೆದುಳಿನ ಚಿಕಿತ್ಸೆಯ ಜೊತೆಗೆ, ಈ ಚಿಪ್ ಆನ್‌ಲೈನ್‌ನಲ್ಲಿ ಹಾಡುಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಲಾಗಿದೆ.
ನವದೆಹಲಿ: ಇದನ್ನು ನೀವು ಆಧುನಿಕ ತಂತ್ರಜ್ಞಾನ ಎಂದು ಹೇಳಿ ಅಥವಾ ಇನ್ನೇನೊ, ಮೆದುಳಿನಲ್ಲಿಯೇ ಹಾಡುಗಳ ಲೈವ್ ಸ್ಟ್ರೀಮಿಂಗ್ ನಡೆಸುವ ಸಾಮರ್ಥ್ಯ ಹೊಂದಿದ ಚಿಪ್ ವೊಂದು ಸಿದ್ಧಗೊಂಡಿದೆ. ವಿಶ್ವದ ಅತ್ಯಂತ ಸಿರಿವಂತ ಕಾರ್ ತಯಾರಕ ಕಂಪನಿ ಟೆಸ್ಲಾ ಸಿಇಓ ಎಲೋನ್ ಮಾಸ್ಕ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ತಮ್ಮ ಕಂಪನಿ ಸಿದ್ಧಪಡಿಸಿರುವ ಈ ಚಿಪ್ ಜನರಿಗೆ ಮೆದುಳಿನ ಒಳಗೆಯೇ ಜನರಿಗೆ ಹಾಡಿನ ಆನಂದ ನೀಡಲಿದೆ ಎಂದು ಹೇಳಿದ್ದಾರೆ.
ಟ್ವಿಟ್ಟರ್ ನಲ್ಲಿ ನೀಡಲಾಗಿರುವ ಉತ್ತರವೊಂದು ಈ ರಹಸ್ಯ ಬಿಚ್ಚಿಟ್ಟಿದೆ
ಎಲೋನ್ ಮಸ್ಕ್ ಕಂಪನಿಯು ನ್ಯೂರಾಲಿಂಕ್ ಹೆಸರಿನ ಬ್ರೈನ್ ಚಿಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಚಿಪ್ ಅನ್ನು ಮೂಲತಃ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲ ಬಾರಿಗೆ ಮೆದುಳಿನ ಚಿಕಿತ್ಸೆಯ ಜೊತೆಗೆ, ಈ ಚಿಪ್ ಆನ್‌ಲೈನ್‌ನಲ್ಲಿ ಹಾಡುಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಲಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಎಲೋನ್ ಮಾಸ್ಕ ಅವರಿಗೆ ಈ ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಎಲೋನ್ ಮಸ್ಕ್ 'ಹೌದು' ಎಂದಿದ್ದಾರೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ನ್ಯೂರಾಲಿಂಕ್ ಮೆದುಳನ್ನು ಸರಾಗವಾಗಿ ಕಾರ್ಯನಿರ್ವಹಿಸಲು ಬಳಸಲಾಗುತ್ತದೆ. ಈ ಚಿಪ್ ದೇಹದ ಹಾರ್ಮೋನುಗಳನ್ನು ನಿಯಂತ್ರಿಸಲು ಸಹ ಕಾರ್ಯನಿರ್ವಹಿಸುತ್ತದೆ. ಮೆದುಳಿನ ಕಾಯಿಲೆಗೆ ಬಳಸುವುದರ ಜೊತೆಗೆ, ಈ ಚಿಪ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಅಂದರೆ, ಅನಾರೋಗ್ಯದ ಜೊತೆಗೆ, ದೇಹದ ಪ್ರಮುಖ ಕೆಲಸಗಳನ್ನು ಸಹ ಈ ಚಿಪ್ ಅನ್ನು ಮಾಡಬಹುದು.
ಇತ್ತೀಚೆಗಷ್ಟೇ ಎಲೋನ್ ಮಸ್ಕ್ ತಮ್ಮ ಕಂಪನಿ ಸಿದ್ಧಪಡಿಸಿರುವ ಈ ನ್ಯೂರಾಲಿಂಕ್ ಚಿಪ್ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ ಈ ಚಿಪ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಕಂಪನಿ ಆಗಸ್ಟ್ 28 ರಂದು ಕಂಪನಿ ಈ ಕುರಿತು ದೊಡ್ಡ ಘೋಷಣೆ ಮಾಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ