ಇನ್ಮುಂದೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊ ವೀಕ್ಷಿಸಲು ಬಳಕೆದಾರರು ಹಣ ಪಾವತಿಸಬೇಕಾಗಲಿದೆ. ಕೊರೊನಾ ವೈರಸ್ ಮಹಾಮಾರಿಯ ಕಾಲದಲ್ಲಿ ಪರ್ಫಾರ್ಮಿಂಗ್ ಆರ್ಟ್ ಗೆ ಸಂಬಂಧಿಸಿದ ಜನರು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಇದರಿಂದ ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊ ಮಾಡುವವರು ಹೊಸ ವೈಶಿಷ್ಟ್ಯ ಬಳಸಿ ಲೈವ್ ಪ್ರಸಾರವನ್ನು ಪ್ರಾರಂಭಿಸುವ ಮೊದಲು ತಮ್ಮ ಲೈವ್ ವೀಡಿಯೊವನ್ನು ಉಚಿತವಾಗಿರಿಸಬೇಕೆ ಅಥವಾ ಅದಕ್ಕೆ ಶುಲ್ಕ ಪಡೆಯಬೇಕೆ ಎಂಬುದನ್ನು ನಿರ್ಧರಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಸಧ್ಯದ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಕಾರಣ, ಸಂಗೀತಗಾರರು, ಹಾಸ್ಯನಟರು, ವೈಯಕ್ತಿಕ ತರಬೇತುದಾರರು, ಸ್ಪೀಕರ್‌ಗಳಂತಹ ಜನರು ಎಲ್ಲಿಯೂ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೊ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. 'ದಿ ವರ್ಜ್' ಪ್ರಕಟವಾದ ಒಂದು ವರದಿಯ ಪ್ರಕಾರ, ಇಂತಹ ಪರಿಸ್ಥಿತಿಯಲ್ಲಿ ಫೇಸ್ ಬುಕ್ ಕ್ರಿಯೇಟಿವ್ ಆರ್ಟಿಸ್ಟ್ ಹಾಗೂ ಸಣ್ಣ ಉದ್ಯಮಗಳಿಗೆ ಸಹಾಯ ಮಾಡಲು ಮುಂದೆಬಂದಿದೆ. ಈ ಟೂಲ್ ಅನ್ನು ಆನ್ಲೈನ್ ಪೆರ್ಫಾರ್ಮೆನ್ಸ್ ನಿಂದ ಹಿಡಿದು ತರಗತಿಗಳು ಹಾಗೂ ವೃತ್ತಿಪರ ಸಮ್ಮೇಳನಗಳವರೆಗೆ ಬಳಸಬಹುದಾಗಿದೆ.


ಚಾರಿಟಿ ಫಂಡ್ ಸಂಗ್ರಹಿಸುವವರಿಗೂ ಕೂಡ ಸಿಗಲಿದೆ ಸಹಾಯ 
ವಿಡಿಯೋ ಸ್ಟ್ರೀಮ್ ಗಳ ಸಹಾಯದಿಂದ ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಬಹಸುವವರಿಗೂ ಕೂಡ ಫೇಸ್ ಬುಕ್ ನ ಈ ವೈಶಿಷ್ಟ್ಯ ಸಹಾಯ ಮಾಡಲಿದೆ ಎಂದು ಮತ್ತೊಂದು ವರದಿ ಪ್ರಕಟಿಸಿದೆ. ಚಾರಿಟಿಗಾಗಿ ಹಣ ಸಂಗ್ರಹಿಸಲು ಬಯಸುವ ಕಲಾವಿದರು ತಮ್ಮ live ಸ್ಟ್ರೀಮ್ ನಲ್ಲಿ Donate ಆಪ್ಶನ್ ಕೂಡ ಸೇರಿಸಬಹುದು. Donate ಆಯ್ಕೆಯ ಮೂಲಕ ಸಂಗ್ರಹಿಸಲಾಗಿರುವ ಶೇ.100 ರಷ್ಟು ಹಣವನ್ನು ಫೇಸ್ಬುಕ್ ನೇರವಾಗಿ ನಾನ್-ಪ್ರಾಫಿಟ್ ಖಾತೆಯ ಸಂಸ್ಥೆಗೆ ಕಳುಹಿಸಲಿದೆ ಅಷ್ಟೇ ಅಲ್ಲ ಅದರಲ್ಲಿನ ಒಂದು ಚಿಕ್ಕ ಭಾಗವನ್ನೂ ಸಹ ಫೇಸ್ ಬುಕ್ ಪಡೆದುಕೊಳ್ಳುವುದಿಲ್ಲ.


ಆದರೆ, ಈ ಹೊಸ ವೈಶಿಷ್ಟ್ಯದ ಕುರಿತು ಫೇಸ್ ಬುಕ್ ಕಡೆಯಿಂದ ಇನ್ನೂ ಸ್ಪಷ್ಟತೆ ಹೊರಬಂದಿಲ್ಲ. ಈ ವೈಶಿಷ್ಟ್ಯ ಯಾವಾಗ ಬರಲಿದೆ ಹಾಗೂ ಇದರ ಮೇಲೆ ಲಿಮಿಟೆಶನ್ ಇರಲಿದೆಯೇ ಅಥವಾ ಇಲ್ಲವೇ ಇತ್ಯಾದಿಗಳ ಮಾಹಿತಿ ಇನ್ನೂ ಹೊರಬಂದಿಲ್ಲ. 'ದಿ ವೆರ್ಜ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ವೈಶಿಷ್ಟ್ಯವನ್ನು ಹೊರತುಪಡಿಸಿ ಫೇಸ್ ಬುಕ್ ಇವೆಂಟ್ ಕ್ರಿಯೆಟರ್ಸ್ ಗಳಿಗಾಗಿ  ತಮ್ಮ ಇವೆಂಟ್ ಅನ್ನು "ಆನ್ಲೈನ್ ಓನ್ಲಿ" ಮಾರ್ಕ್ ಮಾಡುವ ವಿಕಲ್ಪ ಸೇರಿಸುತ್ತಿದೆ ಎನ್ನಲಾಗಿದೆ.