Another Type of Omicron:ಕೊರೊನಾ ವೈರಸ್ (Coronavirus) ನ  ಹೊಸ ರೂಪಾಂತರಿಯಾದ ಓಮಿಕ್ರಾನ್ ಇದೀಗ ಭಾರತದಲ್ಲಿಯೂ ಕೂಡ ವೇಗವಾಗಿ ಹರಡುತ್ತಿದೆ. ಈ ರೂಪಾಂತರಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಇದೀಗ  ಈ ರೂಪಾಂತರದ ಕುರಿತು ಮಹತ್ವದ ಅಪ್ಡೇಟ್  ಪ್ರಕಟಗೊಂಡಿದೆ. ಆಸ್ಟ್ರೇಲಿಯಾದ ಆರೋಗ್ಯ ಅಧಿಕಾರಿ ಇತ್ತೀಚೆಗೆ Omicron B.1.1529 ರೂಪಾಂತರವು ಈಗ ಎರಡು ರೂಪಗಳಲ್ಲಿ ಅಂದರೆ BA.1 ಮತ್ತು BA.2 ನಲ್ಲಿ ವಿಭಜನೆಗೊಂಡಿದೆ  ಎಂದು ಹೇಳಿದ್ದಾರೆ.  ಅಂದರೆ, ಓಮಿಕ್ರಾನ್ ರೂಪಾಂತರಿಯ ಎರಡು ರೂಪಾಂತರಗಳು ಬೆಳಕಿಗೆ ಬಂದಿವೆ.


COMMERCIAL BREAK
SCROLL TO CONTINUE READING

ವೈರಾಲಜಿಸ್ಟ್‌ಗಳು ಹೇಳುವಂತೆ ಓಮಿಕ್ರಾನ್‌ನ (Covid-19) ಹೊಸ ರೂಪಾಂತರಿತ BA.2 ನ (New Omicron Variant) ಅನೇಕ ಪ್ರಕರಣಗಳು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಕಂಡುಬಂದಿವೆ. ಅವರ ಪ್ರಕಾರ, ಈ ಹೊಸ ರೂಪಾಂತರವನ್ನು ಕಂಡುಹಿಡಿಯುವುದು ಇನ್ನೂ ಕಷ್ಟಕರವಾಗಿದೆ.


ಇದನ್ನೂ ಓದಿ-ಮುಂಬೈನಲ್ಲಿ ಬೃಹತ್ ಕೂಟಗಳ ಮೇಲೆ ಎರಡು ದಿನಗಳ ನಿಷೇಧ ಹೇರಿಕೆ


ಓಮಿಕ್ರಾನ್‌ನ (Omicron) ಈ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಿಂದ ಬ್ರಿಸ್ಬೇನ್‌ಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಕಂಡುಬಂದಿದೆ. ಈ ರೂಪಾಂತರವನ್ನು 'ಓಮಿಕ್ರಾನ್ ಲೈಕ್' ಎಂದು ಕರೆಯಲಾಗುತ್ತಿದ್ದು, ಗುರುತಿಸಲು ಮತ್ತಷ್ಟು ಕಷ್ಟಕರವಾಗಿದೆ. ಆದರೆ, ಓಮಿಕ್ರಾನ್‌ನ ಈ ಹೊಸ ರೂಪಾಂತರವು ಕರೋನಾ ಲಸಿಕೆಯನ್ನು ಎಷ್ಟು ಚೆನ್ನಾಗಿ ದಾರಿ ತಪ್ಪಿಸಲು ಸಮರ್ಥವಾಗಿದೆ ಎಂಬುದನ್ನು ಇನ್ನೂ ಖಚಿತಪಡಿಸಲಾಗಿಲ್ಲ.


ಇದನ್ನೂ ಓದಿ-Omicron scare: 'ಅಪಾಯದಲ್ಲಿರುವ' ರಾಷ್ಟ್ರಗಳ ಪಟ್ಟಿಯಿಂದ ಸಿಂಗಾಪುರವನ್ನು ಕೈಬಿಟ್ಟ ಭಾರತ


ಆನುವಂಶಿಕವಾಗಿ ಈ ರೂಪಾಂತರಿ ಓಮಿಕ್ರಾನ್ ನಂತೆಯೇ ಇದೆ
ತಜ್ಞರು ಹೇಳುವ ಪ್ರಕಾರ, ಈ ರೂಪಾಂತರಿತವು ಆನುವಂಶಿಕವಾಗಿ ಓಮಿಕ್ರಾನ್ ಗೆ ಹೋಲುತ್ತದೆ. ಆದರೆ ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹೊಸ ರೂಪಾಂತರಿತ ಆನುವಂಶಿಕವಾಗಿ ವಿಚಿತ್ರವಾಗಿಲ್ಲ. ಇದು ವೈದ್ಯರಿಗೆ ಅದರ ಹರಡುವಿಕೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಇದೇ ವೇಳೆ  ಆನುವಂಶಿಕ ವಿಚಿತ್ರತೆಗಳ ಅನುಪಸ್ಥಿತಿಯಿಂದಾಗಿ, ಅದನ್ನು ಗುರುತಿಸಲು ಹೆಚ್ಚು ಕಷ್ಟವಾಗುತ್ತದೆ. ಪ್ರಸ್ತುತ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಈ ಬಿಎ.2 ಎಂಬ ಮ್ಯಟೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ವೈರಾಲಜಿಸ್ಟ್‌ಗಳು ಹೇಳುತ್ತಾರೆ.


ಇದನ್ನೂ ಓದಿ-Omicronನ ಪ್ರತಿಯೊಂದು ಕೊರೊನಾ ರೂಪಾಂತರಿಗೂ ರಾಮಬಾಣ ಈ ಔಷಧಿ ಎಂದ ವಿಜ್ಞಾನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ