New Year 2024 Celebration : ನ್ಯೂಜಿಲೆಂಡ್‌ನ ಆಕ್ಲೆಂಡ್ ಜನರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸುವ ಮೂಲಕ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 


COMMERCIAL BREAK
SCROLL TO CONTINUE READING

ನ್ಯೂ ಇಯರ್‌ ಲೇಸರ್ ಮತ್ತು ಪಟಾಕಿ ಪ್ರದರ್ಶನ ಅದ್ದೂರಿಯಾಗಿತ್ತು. ಸ್ಕೈ ಟವರ್ ಮೇಲೆ ಹತ್ತು ಸೆಕೆಂಡ್ ಕೌಂಟ್ ಡೌನ್ ನಂತರ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಸುಮಾರು 5 ನಿಮಿಷಗಳ ಕಾಲ ಪಟಾಕಿಗಳನ್ನು ಸುಡುವ ಮೂಲಕ ಕಿವೀಸ್ ಅದ್ಧೂರಿಯಾಗಿ ನ್ಯೂ ಇಯರ್‌ ಅನ್ನು ವೆಲ್‌ಕಮ್‌ ಮಾಡಿದರು. ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿಯು ಪ್ರಪಂಚದ ಇತರೆ ದೇಶಕ್ಕಿಂತ ಮುಂಚಿತವಾಗಿ ಹೊಸ ವರ್ಷವನ್ನು ಪ್ರಾರಂಭಿಸುತ್ತದೆ. 


ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಸಸ್ಪೆನ್ಸ್, ಥ್ರಿಲ್ಲರ್ ʼರಣಾಕ್ಷʼ ಫಸ್ಟ್ ಲುಕ್..! 


ನ್ಯೂಜಿಲೆಂಡ್‌ಗಿಂತ ಮೊದಲು ಅಲ್ಲಿ ಆಚರಣೆಗಳು ಪ್ರಾರಂಭವಾಗಿವೆ. ಇದನ್ನು ಕ್ರಿಸ್ಮಸ್ ದ್ವೀಪ ಎಂದೂ ಕರೆಯುತ್ತಾರೆ. ಕಿರಿಬಾಟಿ ನಂತರ, ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಆಚರಣೆಗಳು ನಡೆಯುತ್ತವೆ. ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಕ್ಷಣಗಣನೆ ಬಹುತೇಕ ಮುಗಿದಿದೆ. ಪ್ರತಿ ವರ್ಷ ದೇಶದ ಜನರು ಸಿಡ್ನಿ ಹಾರ್ಬರ್ ಬ್ರಿಡ್ಜ್ ಪ್ರದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.