ವೆಲ್ಲಿಂಗ್ಟನ್: ಕ್ರೈಸ್ಟ್ ಚರ್ಚ್‍ನ ಮಸೀದಿ ಹತ್ಯಾಕಾಂಡದಲ್ಲಿ 50 ಜನರು ಸಾವಿಗೆ ಕಾರಣವಾದ ಮಿಲಿಟರಿ-ಶೈಲಿಯ ಅರೆ ಆಟೊಮ್ಯಾಟಿಕ್ಸ್ ಮತ್ತು ಅಸಾಲ್ಟ್  ರೈಫಲ್‍ಗಳ ಮಾರಾಟವನ್ನು ಕೂಡಲೇ ನಿಷೇಧಿಸಲಾಗಿದೆ ಎಂದು ಪ್ರಧಾನಮಂತ್ರಿ ಜಸಿಂಡಾ ಆರ್ಡನ್ ಇಂದು ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್‍ನಲ್ಲಿ ಸೆಮಿ ಆಟೋಮ್ಯಾಟಿಕ್ ರೈಫಲ್‍ಗಳ ಮಾರಾಟವನ್ನು ಕೂಡಲೇ ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳ ಖರೀದಿಗೆ ನೂತನ ಕಾನೂನನ್ನು ಸ್ಥಾಪಿಸಲಾಗುವುದು. ಹೊಸ ಕಾನೂನು ಎಪ್ರಿಲ್ 11 ರೊಳಗೆ ಜಾರಿಗೆ ಬರಲಿದೆ ಎಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಾಕಂಡಾ ಅರ್ಡೆರ್ನ್ ಹೇಳಿದ್ದಾರೆ.


ನ್ಯೂಜಿಲ್ಯಾಂಡ್‌ನ ಕ್ರೈಸ್ಟ್​​​ಚರ್ಚ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.