ನವದೆಹಲಿ : ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ (Coronavirus) ಪ್ರಕರಣದ ಹಿನ್ನೆಲೆಯಲ್ಲಿ ಏಪ್ರಿಲ್ 11 ರಿಂದ ಭಾರತದಿಂದ ಬರುವ ಪ್ರಯಾಣಿಕರನ್ನು ನ್ಯೂಜಿಲೆಂಡ್ (Newzealand)  ತಾತ್ಕಾಲಿಕವಾಗಿ ನಿಷೇಧಿಸಿದೆ. ಭಾರತದಲ್ಲಿ ಕರೋನಾ ವೈರಸ್ ಹೊಸ  ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಮೂರು ದಿನಗಳಲ್ಲಿ ಎರಡು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. 


COMMERCIAL BREAK
SCROLL TO CONTINUE READING

ಭಾರತದಿಂದ ತೆರಳುವ ನ್ಯೂಜಿಲೆಂಡ್ ನಾಗರಿಕರ ಮೇಲೂ ನಿಷೇಧ: 
 ಭಾರತದಿಂದ ಬರುವ ಎಲ್ಲಾ ಪ್ರಯಾಣಿಕರಿಗೂ (Passengers) ನಿಷೇಧ ಹೇರಲಾಗಿದೆ. ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಈ ನಿಷೇಧದ ಬಗ್ಗೆ ಪ್ರಕಟಿಸಿದ್ದಾರೆ. ಭಾರತದಿಂದ (India) ತಮ್ಮ ದೇಶಕ್ಕೆ ಮರಳುತ್ತಿರುವ ನ್ಯೂಜಿಲೆಂಡ್‌ನ ನಾಗರಿಕರನ್ನೂ ಇದರಲ್ಲಿ ಸೇರಿಸಲಾಗಿದೆ. ವರದಿಯ ಪ್ರಕಾರ, ಈ ನಿಷೇಧವು ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 28 ರವರೆಗೆ ಜಾರಿಯಲ್ಲಿರುತ್ತದೆ. ಅಂದರೆ ನ್ಯೂಜಿಲೆಂಡ್‌ (Newzealand) ನಾಗರೀಕರು ಕೂಡಾ ಏಪ್ರಿಲ್ 28ರವರೆಗೆ ತಮ್ಮ ದೇಶಕ್ಕೆ ಹೋಗುವಂತಿಲ್ಲ. 


ಇದನ್ನೂ ಓದಿ : Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ


ನಿರಂತರವಾಗಿ ಹೆಚ್ಚುತ್ತಿದೆ ಕರೋನಾ ಪ್ರಕರಣಗಳು : 
ದೇಶದಲ್ಲಿ ಕರೋನಾ ವೈರಸ್ (Coronavirus) ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.  ಮಹಾರಾಷ್ಟ್ರ, ಛತ್ತೀಸ್ ಘಡ್, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ (Kerala) ಶೇ 80.70 ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ (Maharastra) ಅತಿ ಹೆಚ್ಚು 59,907 ಪ್ರಕರಣಗಳು ದಾಖಲಾಗಿವೆ. ಛತ್ತೀಸ್ ಘಡ್  ದಲ್ಲಿ 9,921 ಮತ್ತು ಕರ್ನಾಟಕದಲ್ಲಿ 6150 ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ಸಕ್ರಿಯ ರೋಗಿಗಳ ಸಂಖ್ಯೆಯೂ 8,43,473 ಕ್ಕೆ ಏರಿದೆ. 


ಇದನ್ನೂ ಓದಿ : COVID-19: ಕೊರೋನಾದಿಂದ ಬರುತ್ತೆ 'ಶ್ರವಣ ದೋಷ' ತೊಂದ್ರೆ: ರಿಸರ್ಚ್ ನಿಂದ ಹೊರ ಬಿತ್ತು ಸತ್ಯ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.