ವಾಷಿಂಗ್ಟನ್:ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಈಗ ಆ ಹುದ್ದೆಗೆ ರಾಜಿನಾಮೆ ನೀಡಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.



COMMERCIAL BREAK
SCROLL TO CONTINUE READING

ಮಂಗಳವಾರದಂದು ನಿಕ್ಕಿ ಹ್ಯಾಲೆ ನೇರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ  ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಇದನ್ನು ಟ್ರಂಪ್ ಕೂಡ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತಾಗಿ ಟ್ವೀಟ್ ಮಾಡಿರುವ  ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ " ಓವೆಲ್ ಆಫಿಸ್ ನಲ್ಲಿ  10.30 ಗೆ ನನ್ನ ಫ್ರೆಂಡ್ ಮತ್ತು ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಅವರೊಂದಿಗೆ ಒಂದು ದೊಡ್ಡ ಘೋಷಣೆ ಮಾಡಲಾಗುತ್ತದೆ" ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.


 ದಕ್ಷಿಣ ಕ್ಯಾರೊಲಿನಾದ ಗವರ್ನರ್ ಆಗಿದ್ದ ನಿಕ್ಕಿ ಹ್ಯಾಲೆ 2017 ರ ಜನವರಿಯಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿ ಟ್ರಂಪ್ ಆಡಳಿತದಿಂದ ನೇಮಕವಾಗಿದ್ದರು.ಮಂಗಳವಾರ ಬೆಳಗ್ಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸರ್ರಾ ಸ್ಯಾಂಡರ್ಸ್ ಅವರು ನಿಕ್ಕಿ ಹ್ಯಾಲೆ ಮತ್ತು ಅಧ್ಯಕ್ಷ ಟ್ರಂಪ್ ಇಬ್ಬರು ಓವಲ್ ಆಫಿಸ್ ನಲ್ಲಿ ಬೆಳಗ್ಗೆ 10.30 ಭೇಟಿ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.