ಗಾಜಾದಲ್ಲಿ ಪತ್ರಕರ್ತರಿಗೆ ಸುರಕ್ಷತೆಯ ಭರವಸೆ ಇಲ್ಲ! ಇಸ್ರೇಲ್ ಸೇನೆಯ ಘೋಷಣೆ
Israel-Hamas War Updates: ಇಸ್ರೇಲ್ನ ಗುರಿಯಾಗಿರುವ ಗಾಜಾ ಪಟ್ಟಿಯಲ್ಲಿರುವ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ನ ಮಿಲಿಟರಿ ಹೇಳಿದೆ.
Israel-Hamas War: ಪ್ಯಾಲೆಸ್ತೀನ್ ಪ್ರಾಂತ್ಯದ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಭಯೋತ್ಪಾದಕ ಗುಂಪು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ರಾಕೆಟ್ ಹಾರಿಸಿ, ಪ್ರದೇಶದೊಳಗೆ ನುಗ್ಗಿ 1,400 ಜನರನ್ನು ಕೊಂದಿತ್ತು. ಇದೇ ಕಾರಣಕ್ಕಾಗಿ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದು, ದಾಳಿಯಲ್ಲಿ ಸುಮಾರು 7,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ.
ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಎಎಫ್‌ಪಿ ಇಸ್ರೇಲ್ ಸೇನೆಗೆ ಪತ್ರ ಬರೆದಿದ್ದು, ಗಾಜಾದಲ್ಲಿ ಪತ್ರಕರ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸೇನೆಯು ಗಾಜಾದಲ್ಲಿ ತನ್ನ ಪತ್ರಕರ್ತರ ಮೇಲೆ ದಾಳಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡುವಂತೆ ಕೋರಲಾಗಿತ್ತು.
ಇದನ್ನೂ ಓದಿ-ಗಾಜಾದ ಮೇಲೆ ಇಸ್ರೇಲ್ ಭಾರೀ ಬಾಂಬ್ ದಾಳಿ : 24 ಗಂಟೆಗಳಲ್ಲಿ 400 ಪ್ಯಾಲೆಸ್ತೀನ್ ಪ್ರಜೆಗಳ ಸಾವು
ಪ್ರತಿಕ್ರಿಯೆಯಾಗಿ ಇಸ್ರೇಲಿ ಮಿಲಿಟರಿ ಈ ವಾರ ರಾಯಿಟರ್ಸ್ ಮತ್ತು ಎಎಫ್‌ಪಿಗೆ ಪತ್ರ ಬರೆದಿದೆ. "ಇಸ್ರೇಲ್ ಸೇನೆಯು ಗಾಜಾದಾದ್ಯಂತ ಹಮಾಸ್ ಎಲ್ಲಾ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಂಡಿದೆ. ಹಮಾಸ್ ಉದ್ದೇಶಪೂರ್ವಕವಾಗಿ ಪತ್ರಕರ್ತರು ಮತ್ತು ನಾಗರಿಕರು ಇರುವ ಪ್ರದೇಶಗಳ ಬಳಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹಮಾಸ್ ರಾಕೆಟ್‌ಗಳು ಆಕಸ್ಮಿಕವಾಗಿ ಗಾಜಾದಲ್ಲಿ ನಾಗರಿಕರನ್ನು ಕೊಲ್ಲಬಹುದು ಈ ಸಂದರ್ಭಗಳಲ್ಲಿ, ನಿಮ್ಮ ಉದ್ಯೋಗಿಗಳ ಅಂದರೆ ಪತ್ರಕರ್ತರ ಸುರಕ್ಷತೆಯನ್ನು ನಾವು ಖಾತರಿಪಡಿಸುವುದಿಲ್ಲ ಮತ್ತು ಅವರಿಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ನಾವು ಒತ್ತಾಯಿಸುತ್ತೇವೆ" ಎಂದು ತಿಳಿಸಿದೆ.
ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಷ್ಟು ಸುದ್ದಿ ಸಂಸ್ಥೆಗಳು ಇದೇ ರೀತಿಯ ಪತ್ರವನ್ನು ಸ್ವೀಕರಿಸಿವೆ ಎಂಬುದು ತಿಳಿದಿಲ್ಲ. ಆದರೆ ಇತ್ತೀಚೆನ ವರದಿಯ ಪ್ರಕಾರ ಯುಎನ್ ಮಾನವೀಯ ಆಧಾರದ ಮೇಲೆ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Train Accident: ಬಾಂಗ್ಲಾದೇಶದಲ್ಲಿ ಭೀಕರ ರೈಲು ದುರಂತ, 13 ಜನರ ದುರ್ಮರಣ, ಹಲವರಿಗೆ ಗಾಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.