ನವ ದೆಹಲಿ: ಗುರುತ್ವಾಕರ್ಷಣೆ ಕುರಿತು ಸಂಶೋಧನೆ ನಡೆಸಿರುವುದನ್ನು ಪರಿಗಣಿಸಿರುವುದರಿಂದ  ರೇನರ್ ವೀಸ್, ಬ್ಯಾರಿ ಸಿ. ಬ್ಯಾರೀಶ್ ಮತ್ತು ಕಿಪ್ ಎಸ್. ಥಾರ್ನೆ ಎಂಬ ಮೂವರು ವಿಜ್ಞಾನಿಗಳು 2017 ರ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


COMMERCIAL BREAK
SCROLL TO CONTINUE READING

ರೇನರ್ ವೀಸ್, ಬ್ಯಾರಿ ಸಿ. ಬ್ಯಾರಿಶ್ ಮತ್ತು ಕಿಪ್ ಎಸ್. ಥಾರ್ನೆ ಅವರ ಮೇಲೆ "ಲಿಯೋ ಡಿಟೆಕ್ಟರ್ ಮತ್ತು ಗುರುತ್ವಾಕರ್ಷಣೆಯ ಅಲೆಗಳ ವೀಕ್ಷಣೆಗೆ ನಿರ್ಣಾಯಕ ಕೊಡುಗೆಗಳನ್ನು" ನೀಡಿದ್ದಕ್ಕಾಗಿ ಈ  ಪ್ರಶಸ್ತಿಯನ್ನು ಜಂಟಿಯಾಗಿ ನೀಡಲಾಗಿದೆ.


ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತದ ಭಾಗವಾಗಿ ಆಲ್ಬರ್ಟ್ ಐನ್ಸ್ಟೀನ್ ರವರು ಶತಮಾನದ ಹಿಂದೆ ಊಹಿಸಿದ್ದರು. ಆದರೆ 2015 ರಲ್ಲಿ ಮೊದಲ ಬಾರಿಗೆ ಗುರುತ್ವಾಕರ್ಷಣೆಯ ಅಲೆಗಳು ವಿಶ್ವದಲ್ಲಿ ಹಿಂಸಾತ್ಮಕ ಪ್ರಕ್ರಿಯೆಗಳಿಂದ ಉಂಟಾಗುವ ಬಾಹ್ಯಾಕಾಶ-ಸಮಯದ ಫ್ಯಾಬ್ರಿಕ್ನಲ್ಲಿ ಉಂಟಾಗುವ ತರಂಗಗಳು.