ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ! ಪೊಲೀಸ್ ಅಧಿಕಾರಿ ಸೇರಿ 5 ಜನರ ಸಾವು
ಶುಕ್ರವಾರ ಉತ್ತರ ಕೆರೊಲಿನಾದಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಇಲ್ಲಿಯವರೆಗೆ 5 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿ: ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆಗಳು ಮುಂದುವರೆದಿವೆ. ಎಷ್ಟೇ ಪ್ರಯತ್ನ ಪಟ್ಟರೂ ಗುಂಡಿನ ದಾಳಿಯ ಘಟನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ಉತ್ತರ ಕೆರೊಲಿನಾದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಅಧಿಕಾರಿ ಸೇರಿ 5 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸಾವನ್ನಪ್ಪುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸತಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 5 ಗಂಟೆಗಳ ಕಾಲ ಈ ಘಟನೆ ಸಂಭವಿಸಿದೆ ಎಂದು ರೇಲಿ ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯಲ್ಲಿ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚೀನಾಗೆ ಮತ್ತೆ ಬಂದ ಕೊರೊನಾ ಮಹಾಮಾರಿ, ಲಾಕ್ ಡೌನ್ ಜಾರಿ
ಇದು ನಮಗೆ ದುಃಖದ ದಿನವಾಗಿದೆ
"ಭಾರತವು ಈ ಕತ್ತಲೆಯ ದಿಗಂತದಲ್ಲಿ ಪ್ರಕಾಶಮಾನವಾದ ತಾಣ"
ಅಮೆರಿಕದಲ್ಲಿ ಫೈರಿಂಗ್ ದೊಡ್ಡ ಸಮಸ್ಯೆ
ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ. 2021ರಲ್ಲಿ ಸುಮಾರು 49,000 ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಂದರೆ ಪ್ರತಿದಿನಕ್ಕೆ 130ಕ್ಕೂ ಹೆಚ್ಚು ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ತಿಂಗಳ ದೊಡ್ಡ ಘಟನೆ
ಈ ತಿಂಗಳ 6ರಂದು ಮೆಕ್ಸಿಕೋದಲ್ಲಿ ಗುಂಡಿನ ದಾಳಿಯ ಪ್ರಮುಖ ಘಟನೆ ಬೆಳಕಿಗೆ ಬಂದಿದೆ. ನಂತರ ಮೆಕ್ಸಿಕನ್ ಸಿಟಿ ಹಾಲ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದರು. ಮೃತರಲ್ಲಿ ಮೇಯರ್ ಕೂಡ ಸೇರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.