ನಿರಂಕುಶಾಧಿಕಾರಿ Kim Jong ಹೊರಡಿಸಿರುವ ತುಘಲಕ್ ಫರ್ಮಾನ್ ಕೇಳಿ ನೀವು ದಂಗಾಗುವಿರಿ
ಈ ಬಾರಿ ನಿರಂಕುಶಾಧಿಕಾರಿ ಹೊರಡಿಸಿರುವ ತುಘಲಕ್ ಫರ್ಮಾನ್ ಶಾಲೆಯ ಮಕ್ಕಳಿಗೆ ಸಂಬಂಧಿಸಿದೆ.
ಸಿಯೋಲ್: ನಾರ್ತ್ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ (Kim Jong Un) ತನ್ನ ದೇಶದ ನಾಗರಿಕರಿಗೆ ಒಂದು ವಿಚಿತ್ರ ಫರ್ಮಾನು ಹೊರಡಿಸಿದ್ದಾರೆ. ಅವರ ಈ ಫರ್ಮಾನ್ ಪ್ರಿ ಮತ್ತು ಪ್ಲೇ ಸ್ಕೂಲ್ ಮಕ್ಕಳಿಗೆ ಸಂಬಂಧಿಸಿದೆ. ಈ ಆದೇಶದಲ್ಲಿ ಮಕ್ಕಳಿಗೆ ನಿತ್ಯ 90 ನಿಮಿಷಗಳವರೆಗೆ ಕಿಮ್ ಜೊಂಗ್ ಉನ್ ಕುರಿತು ಬೋಧಿಸಬೇಕು ಎನ್ನಲಾಗಿದೆ. ಈ ಪಾಠ ಹೇಳುವ ವೇಳೆ ದೇಶದ ಸರ್ವಾಧಿಕಾರಿ ಕುರಿತು ಗುಣಗಾನ ಮಾಡುವಂತೆ ಹೇಳಲಾಗಿದೆ.
ಕಿಮ್ ಜೊಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ನಿತ್ಯ ಕನಿಷ್ಠ 90 ನಿಮಿಷ ಅಧ್ಯಯನ ಮಾಡಿಸಬೇಕು ಎಂದು ಪ್ಲೇ ಶಾಲೆಯಲ್ಲಿ ಕಲಿಯುವ ಮಕ್ಕಳಿಗಾಗಿ ಹೊರಡಿಸಲಾದ ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಇದರ ಮಿತಿ 30 ನಿಮಿಷಗಳಾಗಿದ್ದು, ಈಗ ಅದನ್ನು ನೇರವಾಗಿ 60 ನಿಮಿಷಗಳಿಗೆ ಹೆಚ್ಚಿಸಲಾಗಿದೆ. ಈ ಆದೇಶವನ್ನು ಕಳೆದ ತಿಂಗಳು ಸರ್ವಾಧಿಕಾರಿಯ ಸಹೋದರಿ ಕಿಮ್ ಯೋ ಜೊಂಗ್ (Kim Yo Jong) ಬಿಡುಗಡೆ ಮಾಡಿದ್ದಾರೆ.
ಕಿಮ್ ಜೊಂಗ್ ಉನ್ ಕುರಿತು ಓದುತ್ತಿರುವ ಅಲ್ಲಿನ ಮಕ್ಕಳಿಗೆ, ಯಾವ ರೀತಿ ತನ್ನ ಐದನೇ ವಯಸ್ಸಿನಲ್ಲಿ ನಾರ್ತ್ ಕೊರಿಯಾದ ಸರ್ವಾಧಿಕಾರಿ ದೋಣಿಯನ್ನು ಚಲಾಯಿಸುತ್ತಿದ್ದರು ಎಂಬುದನ್ನು ಹೇಳಿಕೊಡಲಾಗುತ್ತದೆ. ಬಿಲ್ಲುಗಾರಿಕೆ ಹಾಗೂ ಬೇಟೆಯಾಡುವ ಶೌಕೀನ್ ಕೂಡ ಆಗಿದ್ದರು ಎನ್ನಲಾಗುತ್ತದೆ. ಇವೆಲ್ಲದರ ಜೊತೆಗೆ ಕಿಮ್ ಓದಿನಲ್ಲಿಯೂ ಕೂಡ ಮುಂದಿದ್ದ ಎನ್ನಲಾಗಿದೆ. ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಿಮ್ ಯೋ ಜೊಂಗ್ ಉತ್ತರ ಕೊರಿಯಾದ ಎರಡನೆಯ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದ್ದಾಳೆ ಎನ್ನಲಾಗಿದೆ.
Also Read- ದಕ್ಷಿಣ ಕೊರಿಯಾಗೆ 'ಧಮ್ಕಿ' ಹಾಕಿದ ಕಿಮ್ ಜೊಂಗ್ ಉನ್ ಸಹೋದರಿ ..!
ಗ್ರೇಟ್ ನೆಸ್ ಶಿಕ್ಷಣದ ಮೇಲೆ ಒಟ್ಟು
ಕಿಮ್ ಜೊಂಗ್ ಅವರ ಆಗಸ್ಟ್ 25 ರಂದು ಹೊರಡಿಸಲಾದ ಹೊಸ ಸುಗ್ರೀವಾಜ್ಞೆಯ ಪ್ರಕಾರ ಪಠ್ಯಪುಸ್ತಕಗಳಲ್ಲಿ 'ಶ್ರೇಷ್ಠತೆ ಶಿಕ್ಷಣ' ಎಂದು ಸೇರಿಸಲಾಗಿದೆ ಎಂದು ಸಿಯೋಲ್‌ನ ಸ್ಥಳೀಯ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ. ಇದರ ಉದ್ದೇಶ 'ಉತ್ತರ ಕೊರಿಯಾದ ಆಡಳಿತಗಾರನಿಗೆ ಸಂಪೂರ್ಣ ನಿಷ್ಠೆ ಮತ್ತು ನಂಬಿಕೆಯನ್ನು ಹುಟ್ಟುಹಾಕುವುದಾಗಿದೆ. ಅದರ ಹಿಂದಿನ ಕ್ರಮದಲ್ಲಿ, ಶಾಲೆಯಲ್ಲಿರುವ ಮಕ್ಕಳಿಗೆ ಕಿಮ್ ಜೊಂಗ್ ಉನ್ ಕುರಿತು ಸುಮಾರು 30 ನಿಮಿಷಗಳನ್ನು ಮಾತ್ರ ಓದುವಂತೆ ಸೂಚನೆ ನೀಡಲಾಗಿತ್ತು.
ಉತ್ತರ ಕೊರಿಯಾದ ಪ್ರೀ ಸ್ಕೂಲ್ ಗಳು ಸಾಮಾನ್ಯವಾಗಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮೂರು ಗಂಟೆಗಳ ತರಗತಿಯನ್ನು ತೆಗೆದುಕೊಳ್ಳುತ್ತವೆ. ಇದರಲ್ಲಿ, ಮಕ್ಕಳು ದೈಹಿಕ ಶಿಕ್ಷಣ, ಪ್ಲೇ ಮತ್ತು ಕೊರಿಯನ್ ವರ್ಣಮಾಲೆಗಳನ್ನು ಅಧ್ಯಯನ ಮಾಡುತ್ತಾರೆ. ಆದರೆ,ಶಿಕ್ಷಕರಿಗೆ ಇದೀಗ ಕಿಮ್ ಜೊಂಗ್ ಉನ್ ಹೊರಡಿಸಿರುವ ಆಜ್ಞೆ ಸವಾಲಾಗಿ ಪರಿಣಮಿಸಿದೆ. ಇದರಿನ ಅವರು ತುಂಬಾ ನಿರಾಶರಾಗಿದ್ದು, ಇಷ್ಟೊಂದು ಅವಧಿಗೆ ಕಿಮ್ ಜೊಂಗ್ ಉನ್ ಕುರಿತ ಮಹಾನ್ ಜೀವನಗಾಥೆಗಾಗಿ ಪ್ರತ್ಯೇಕ ಟೈಮ್ ಟೇಬಲ್ ಹೇಗೆ ಸೆಟ್ ಮಾಡುವುದು ಎಂಬುದು ಅವರ ಮುಂದಿರುವ ಪ್ರಶ್ನೆ