ಉತ್ತರ ಕೊರಿಯಾದಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ
ಸಿಯೋಲ್/ವಾಷಿಂಗ್ಟನ್: ಉತ್ತರ ಕೊರಿಯಾ ಬುಧುವಾರದಂದು ಖಂಡಾಂತರ ಕ್ಷಿಪಣಿಯನ್ನು ಜಪಾನ್ ದೇಶದ ಹತ್ತಿರ ಪರೀಕ್ಷೆಗೆ ಒಳಪಡಿಸಿತು.ಇದರಿಂದಾಗಿ ಈಗ ಜಪಾನ್ ಬಹುತೇಕವಾಗಿ ಉತ್ತರ ಕೊರಿಯಾದ ಪ್ಯೊಂಗ್ಯೊಂಗ್ ನ ಯುದ್ದ ಶಸ್ತ್ರಾಸ್ತ್ರ ವಲಯದಲ್ಲಿದೆ ಎಂದು ಹೇಳಬಹುದು.ಈ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ಕ್ಷಿಪಣಿ ಪರೀಕ್ಷೆ ಕೈಗೊಂಡಿದ್ದ ಉ.ಕೋರಿಯಾವನ್ನು ಆಗ ಅಮೇರಿಕಾ ದೇಶವು ಭಯೋತ್ಪಾದನೆಗೆ ಬೆಂಬಲ ನಿಡುವ ಪಟ್ಟಿಯಲ್ಲಿ ಸೇರಿಸಿತ್ತು.ಈಗಾಗಲೇ ಉತ್ತರ ಕೊರಿಯಾ ಡಜನ್ ಗಳಷ್ಟು ಖಂಡಾಂತರ ಕ್ಷಿಪಣಿಗಳನ್ನು ಅದರ ಅಧ್ಯಕ್ಷ ಕಿಮ್ ಜಾಂಗ್ ನೇತೃತ್ವದಲ್ಲಿ ಪರೀಕ್ಷೆಗೆ ಒಳಪಡಿಸಿದೆ.
ದಕ್ಷಿಣ ಕೊರಿಯಾದ ಮಿಲಿಟರಿ ಹೇಳುವಂತೆ 960 ಕೀ.ಮಿ ಎತ್ತರದಲ್ಲಿ ಕ್ಷಿಪಣಿಯು 4,500 ಕೀ.ಮಿ ದೂರದ ಜಪಾನಿನ ಆರ್ಥಿಕ ವಲಯವನ್ನು ತಲುಪಿತು ಎನ್ನಲಾಗಿದೆ. ಜಪಾನಿನ ಪ್ರಧಾನ ಮಂತ್ರಿ ಶಿಂಜೋ ಅಬೆ ದೂರವಾಣಿಯ ಮೂಲಕ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರಿಗೆ ಉ.ಕೊರಿಯಾದ ನಡೆಗೆ ಪ್ರತಿರೋಧ ನಿಡುವ ಕುರಿತಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ .ಟ್ರಂಪ್ ಇದಕ್ಕೆ ಪ್ರತಿಕ್ರಯಿಸಿ ಈ ಸ್ಥಿತಿಯನ್ನು ನಾವು ನಿರ್ವಹಿಸುತ್ತೇವೆ ಎಂದಿದ್ದಾರೆ