Norway: ಯುರೋಪಿಯನ್‌ನ ಈ ದೇಶ ತನ್ನ ಸೌಂದರ್ಯಕ್ಕಾಗಿ ದೇಶದಾದ್ಯಂತ ಹೆಸರುವಾಸಿಯಾಗಿದೆ. ಅಲ್ಲದೇ ಈನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಜನರನ್ನು ಹೂಳಲು ನಿಷೇಧಿಸಲಾಗಿದೆ. ಇದು ನಿಮಗೆ ತಿಳಿದಿದೆಯೇ..? ಹಾಗಾದರೆ ಆ ನಗರ ಯಾವುದು, ಇದಕ್ಕೇ ಕಾರಣವೇನು ಎಂಬುದನ್ನು ತಿಳಿಯೋಣ.. 


COMMERCIAL BREAK
SCROLL TO CONTINUE READING

ತನ್ನ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಆ ದೇಶ ಯುರೋಪಿಯನ್‌ನ ನಾರ್ವೆ ನಗರ. ಸ್ವಾಲ್ಬಾರ್ಡ್ ದ್ವೀಪದ ಲಾಂಗ್‌ಇಯರ್‌ಬೈನ್ ನಗರದ ಜನರು ಪ್ರಕೃತಿಯ ನಿಯಮಗಳನ್ನು ಅನುಸರಿಸುವುದರೊಂದಿಗೆ ಈ ಸ್ಥಳದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದದಾರೆ. ಇದಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ವಿಶಿಷ್ಟ ನಿಯಮಗಳನ್ನು ಪಾಲಿಸಬೇಕು. 


ಇದನ್ನೂ ಓದಿ: ಫಿಂಗರ್‌ಪ್ರಿಂಟ್‌ನಂತೆ ಕಾಣುವ ದ್ವೀಪವನ್ನು ಎಂದಾದರೂ ನೋಡಿದ್ದೀರಾ..! ಇಲ್ಲಿದೆ ನೋಡಿ..


ಉದಾಹರಣೆಗೆ, ಈ ನಗರದಲ್ಲಿ ಬೆಕ್ಕುಗಳನ್ನು ಸಾಕಲು ಮತ್ತು ಸತ್ತ ಜನರನ್ನು ಹೂಳಲು ನಿಷೇಧಿಸಲಾಗಿದೆ. ಲಾಂಗ್‌ಇಯರ್‌ಬೈನ್ ಪ್ರಪಂಚದಲ್ಲೇ ಅತ್ಯಂತ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನೈಸರ್ಗಿಕ ಪ್ರದೇಶಗಳಲ್ಲಿ ಒಂದಾಗಿದೆ. ಐಸ್ ಗುಹೆಗಳು, ಹಿಮನದಿಗಳು, ಉತ್ತರದ ದೀಪಗಳು ಮತ್ತು ವನ್ಯಜೀವಿಗಳನ್ನು ನೋಡಲು ಪ್ರತಿ ವರ್ಷ ಪ್ರಪಂಚದಾದ್ಯಂತದ ಸಾವಿರಾರು ಪ್ರವಾಸಿಗರು ಲಾಂಗ್‌ಇಯರ್‌ಬೈನ್‌ಗೆ ಬರುತ್ತಾರೆ.


ಲಾಂಗ್‌ಇಯರ್‌ಬೈನ್‌ನಲ್ಲಿ ಪ್ರವಾಸಿಗರು ಯಾವಾಗಲೂ ತಮ್ಮೊಂದಿಗೆ ಬಂದೂಕನ್ನು ಹೊಂದಿರಬೇಕು ಎಂಬ ನಿಯಮಗಳಿವೆ. ಇಲ್ಲಿ ಯಾವುದೇ ಸಮಯದಲ್ಲಿ ಹಿಮಕರಡಿಯನ್ನು ಬಂದರೆ ಅದನ್ನು ಎದುರಿಸವ ಸಲುವಾಗಿ ಬಂದೂಕುನ್ನು ಇಟ್ಟುಕೊಂಡಿರಬೇಕು. ಈ ಸ್ವಾಲ್ಬಾರ್ಡ್ ದ್ವೀಪದಲ್ಲಿ ಕೇವಲ 2500 ಜನರು ಮಾತ್ರ ನೆಲೆಸಿದ್ದು, 3 ಸಾವಿರಕ್ಕೂ ಹೆಚ್ಚು ಕರಡಿಗಳು ಇಲ್ಲಿ ವಾಸವಾಗಿವೆ.


ಇದನ್ನೂ ಓದಿ: ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು


ಪಕ್ಷಿಗಳು ಸೇರಿದಂತೆ ಅನೇಕ ವನ್ಯಜೀವಿ ಪ್ರಭೇದಗಳಿಗೆ ಬೆಕ್ಕುಗಳನ್ನು ನೋಡಿದರೆ ಎದರಿಕೆ ಎಂದು ಈ ನಗರದ ಜನರು ಹೇಳುತ್ತಾರೆ. ಹೀಗಾಗಿ 1990ರಿಂದ ಇಲ್ಲಿ ಬೆಕ್ಕು ಸಾಕುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪ್ರವಾಸಿಗರು ಕೂಡ ತನ್ನ ಬೆಕ್ಕನ್ನು ಇಲ್ಲಿಗೆ ಕರೆದೊಯ್ಯಲು ಸಾಧ್ಯವಿಲ್ಲ. 


ಮತ್ತೊಂದು ಅಚ್ಚರಿ ಮೂಡಿಸುವ ಸಂಗತಿ ಎಂದರೆ ಮೃತ ದೇಹಗಳನ್ನು ಹೂಳುವುದು. ಹೌದು  ಸ್ವಾಲ್ಬಾರ್ಡ್ ದ್ವೀಪದಲ್ಲಿ ಸತ್ತ ಮೃತ ದೇಹವನ್ನು ಹೂಳುವುದು ನಿಷೇಧಿಸಲಾಗಿದೆ, ಏಕೆಂದರೆ ದೇಹಗಳು ಮಂಜುಗಡ್ಡೆಯಲ್ಲಿ ಕೊಳೆಯುವುದಿಲ್ಲ. 1918 ರಲ್ಲಿ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಸಮಾಧಿ ಮಾಡಿದ ದೇಹಗಳನ್ನು ಸಹ ಸಮಾಧಿಯಾಗಿರಲಿಲ್ಲ. ಇದರಿಂದಾಗಿ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಕೂಡ ಬೇರೆಡೆಗೆ ಕಳುಹಿಸಲಾಗುತಿತ್ತು ಎನ್ನಲಾಗುತ್ತದೆ.


ಇದನ್ನೂ ಓದಿ: ಬ್ರಿಟಿಷರ ದೇಶದ ಈ ದ್ವೀಪದಲ್ಲಿ ಕಾರುಗಳು, ಫೋನ್‌ ಮತ್ತು ಗಡಿಯಾರವಿಲ್ಲವಂತೆ: ಇದ್ಯಾವುದು ಗೊತ್ತೇ?


ಅಲ್ಲದೇ ಈ ದೇಶದಲ್ಲಿ ಮಕ್ಕಳಿಗೆ ಜನ್ಮ ನೀಡುವುದಕ್ಕೂ ನಿರ್ಬಂಧವಿದೆ ಎನ್ನಲಾಗುತ್ತದೆ. ವಾಸ್ತವವಾಗಿ, ಗರ್ಭಿಣಿಯರು ತಮ್ಮ ಹೆರಿಗೆಯ ದಿನಾಂಕದ ಮೊದಲು ಸ್ವಾಲ್ಬಾರ್ಡ್ ದ್ವೀಪವನ್ನು ಬಿಟ್ಟು ನಾರ್ವೆಯ ಆಸ್ಪತ್ರೆಗೆ ಕಳುಹಿಸುತ್ತಾರೆ, ಇದರಿಂದ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ.


ನಾರ್ವೇಜಿಯನ್ ಸರ್ಕಾರವು ಫೆಬ್ರವರಿಯಲ್ಲಿ ಡ್ರೋನ್‌ಗಳನ್ನು ಹಾರಿಸುವುದನ್ನು ಮತ್ತು ಸಮುದ್ರದ ಮಂಜುಗಡ್ಡೆಯ ಮೇಲೆ ಹಿಮವಾಹನಗಳನ್ನು ಓಡಿಸುವುದನ್ನು ನಿಷೇಧಿಸಿದೆ. ಅಲ್ಲದೆ, ಮಂಜುಗಡ್ಡೆ ಒಡೆಯುವ ಭೀತಿ ಇರುವ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ತಿಂಗಳು ನಿಗದಿತ ಪ್ರಮಾಣದ ಆಲ್ಕೋಹಾಲ್ ಅನ್ನು ಮಾತ್ರ ಪಡೆಯುತ್ತಾರೆ. 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.