Nostradamus Top 5 Predictions: ಅಡಾಲ್ಫ್ ಹಿಟ್ಲರ್‌ನ ಉದಯದಿಂದ ಕೊನೆಯವರೆಗೂ ಜಪಾನ್‌ನ ಅಣುಬಾಂಬ್ ದಾಳಿ, ಸೆಲೆಬ್ರಿಟಿ ಡಯಾನಾ ಸಾವು, 9/11 ದಾಳಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಿಖರವಾದ ಭವಿಷ್ಯ ನುಡಿದ ಫ್ರೆಂಚ್ ಪ್ರವಾದಿ ಮೈಕೆಲ್ ಡಿ ನಾಸ್ಟ್ರಾಡಾಮಸ್ ಅವರು ವರ್ಷ 2023ರ ಪಾಲಿಗೂ ಕೂಡ ಕೆಲ ಆಘಾತಕಾರಿ ಭವಿಷ್ಯಗಳನ್ನು ನುಡಿದಿದ್ದಾರೆ. ಮುಂಬರುವ ಕೆಲ ತಿಂಗಳುಗಳಲ್ಲಿಯು ಕೂಡ ನಾಸ್ಟ್ರಾಡಮಸ್ ಕೆಲ ಆಘಾತಕಾರಿ ಘಟನೆಗಳನ್ನು ಊಹಿಸಿದ್ದರು. ಇತರ ಕೆಲ ಪ್ರವಾದಿಗಳು ಕೂಡ ಶೀಘ್ರದಲ್ಲೇ ಅಂತಹ ಪ್ರಮುಖ ಘಟನೆ ಸಂಭವಿಸುವುದಕ್ಕೆ ಸಂಬಂಧಿಸಿದ ವಿನಾಶಕಾರಿ ಸಂಕೇತಗಳನ್ನು ನೀಡಿದ್ದಾರೆ. ಈ ಮುನ್ಸೂಚನೆಗಳನ್ನು ಮಾನವೀಯತೆಯ ಎಚ್ಚರಿಕೆಯ ಗಂಟೆಗಳು ಎಂದು ಕರೆಯಬಹುದು. ಇವುಗಳಲ್ಲಿ ಕೆಲ ಘಟನೆಗಳ ಮೇಲೆ ಮಾನವ ನಿಯಂತ್ರಣವು ಸಾಧ್ಯವೆಂದು ತೋರುತ್ತದೆ, ಆದರೆ ಹೆಚ್ಚಿನ ಭವಿಷ್ಯವಾಣಿಗಳ ಬಗ್ಗೆ ಏನನ್ನೂ ಮಾಡುವುದು ಮಾನವನ ಕೈಯಲ್ಲಿರುವುದಿಲ್ಲ.

COMMERCIAL BREAK
SCROLL TO CONTINUE READING

ನಾಸ್ಟ್ರಾಡಾಮಸ್‌ನ ಟಾಪ್ 5 ಭವಿಷ್ಯವಾಣಿಗಳು
1566 ರಲ್ಲಿ ತನ್ನ ನಿಧನದ ಮುನ್ನ ನಾಸ್ಟ್ರಾಡಾಮಸ್ ಒಟ್ಟು 6,338 ಭವಿಷ್ಯವಾಣಿಗಳನ್ನು ಬರದಿದ್ದಾರೆ. ಈ ಭವಿಷ್ಯವಾಣಿಗಳಲ್ಲಿ, ಜಗತ್ತು ಯಾವಾಗ ಮತ್ತು ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ಸಹ ಹೇಳಲಾಗಿದೆ. ಅವರ ತಮ್ಮ ಪುಸ್ತಕದಲ್ಲಿ ನಿಮ್ಮ ಮನಸ್ಸು ನಿಮ್ಮ ಮನಸ್ಸಿಗೆ ಮುದ ನೀಡುವ ಸಂಗತಿಗಳನ್ನು ಕೂಡ ಅವರು ಹೇಳಿದ್ದಾರೆ. ಮುಂಬರುವ ದಿನಗಳಿಗಾಗಿ ನಾಸ್ಟ್ರಾಡಾಮಸ್‌ ಊಹಿಸಿರುವ ಪ್ರಮುಖ 5 ಭವಿಷ್ಯವಾಣಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


'ಮೂರನೆಯ ಮಹಾಯುದ್ಧ'
ನಾಸ್ಟ್ರಾಡಾಮಸ್ ಅವರು ತಮ್ಮ ಪ್ರೊಫೆಸೀಸ್ ಪುಸ್ತಕದಲ್ಲಿ,  'ಏಳು ತಿಂಗಳ ಮಹಾಯುದ್ಧ, ದುಷ್ಟ ಕಾರ್ಯಗಳಿಂದ ಜನ ಸಾಯುತ್ತಾರೆ' ಎಂದು ಬರೆದಿದ್ದಾರೆ. ಅನೇಕರು ಇದನ್ನು ವಿಶ್ವ ಯುದ್ಧವೆಂದು ಪರಿಗಣಿಸುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಮೂರನೇ ಮಹಾಯುದ್ಧವಾಗಿ ಬದಲಾಗುತ್ತದೆ ಎಂದು ಅವರ ಅನುಯಾಯಿಗಳು ನಂಬುತ್ತಾರೆ. ಇದೇ ವೇಳೆ, ಚೀನಾ ಮತ್ತು ತೈವಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕದ ಪ್ರವೇಶಕ್ಕೆ ಲಿಂಕ್ ಮಾಡಿಯೂ ಕೂಡ ಇತರ ಅನೇಕರು ಇದನ್ನು ನೋಡುತ್ತಿದ್ದಾರೆ. ಈ ಭವಿಷ್ಯವಾಣಿಯು 2023 ರಲ್ಲಿ ನಿಜವಾಗಬಹುದು ಎಂದು ವ್ಯಾಖ್ಯಾನಕಾರರು ಹೇಳುತ್ತಿದ್ದಾರೆ. ಇದರಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ಅಥವಾ ಅಮೆರಿಕ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಸಂಘರ್ಷದಿಂದಾಗಿ ಮೂರನೇ ಮಹಾಯುದ್ಧದ ಲಕ್ಷಣಗಳು ಗೋಚರಿಸತೊಡಗಿವೆ. ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯ ಪ್ರಕಾರ, ಮೂರನೇ ಮಹಾಯುದ್ಧದ ಸಂಘರ್ಷ ಎರಡು ಮಹಾಶಕ್ತಿಗಳ ನಡುವೆ ಇರಲಿದ್ದು, ಇದು ಸುಮಾರು 27 ವರ್ಷಗಳವರೆಗೆ ಇರಲಿದೆ ಎನ್ನಲಾಗಿದೆ.


'ಸ್ಕೈ ಫೈರ್'
ಇದಕ್ಕೂ ಮುಂದುವರೆದು ಬರೆದುಕೊಂಡಿರುವ ನಾಸ್ಟ್ರಾಡಾಮಸ್ 'ರಾಜ ಕಟ್ಟಡದ ಮೇಲೆ ಸ್ಕೈ ಫೈರ್' ಎಂದಿದ್ದಾರೆ. ಅವರ ಭವಿಷ್ಯವಾಣಿಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆದ ಜನರು ಅದನ್ನು ಹೊಸ ನಾಗರಿಕತೆಯ ಉದಯದೊಂದಿಗೆ ವ್ಯಾಖ್ಯಾನಿಸುತ್ತಿದ್ದಾರೆ. ಇನ್ನೊಂದೆಡೆ, ಅದನ್ನು ವಿಶ್ವ ವಿನಾಶಕ್ಕೆ ಸಂಪರ್ಕಿಸುವ ಮೂಲಕ ಇತರ ಅನೇಕರು ಅದನ್ನು ನೋಡುತ್ತಿದ್ದಾರೆ.


'ಮಹಾನ್ ಶಕ್ತಿಗಳ ಒಕ್ಕೂಟ'
ಮುಂದಿನ ಕೆಲವು ತಿಂಗಳುಗಳಲ್ಲಿ ಎರಡು ಮಹಾನ್ ಶಕ್ತಿಗಳ ಮೈತ್ರಿಯ ರಚನೆಯ ಕುರಿತು ಕೂಡ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಾಡಾಮಸ್ನ ಭವಿಷ್ಯವಾಣಿಯಲ್ಲಿ, ಈ ಮೈತ್ರಿಯು ಪ್ರಬಲ ಪುರುಷ ಮತ್ತು ದುರ್ಬಲ ಪುರುಷ ಅಥವಾ ಮಹಿಳಾ ಮುಖಂಡೆಯ ನಡುವೆ ಇರುತ್ತದೆ ಎನ್ನಲಾಗಿದೆ. ಆದರೆ, ಅದರ ಫಲಿತಾಂಶಗಳು ಉತ್ತಮವಾಗಿರುತ್ತವೆ ಮತ್ತು ಆ ಮೈತ್ರಿ ಶೀಘ್ರದಲ್ಲೇ ಮುರಿದುಹೋಗುತ್ತದೆ ಎಂದು ಅವರು ಬರೆದಿದ್ದಾರೆ.


ಮಂಗಳ ಗ್ರಹದ ಮೇಲೆ ಬೆಳಕು ಬೀಳಲಿದೆ
ನಾಸ್ಟ್ರಾಡಾಮಸ್ ಮಂಗಳ ಗ್ರಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 'ಮಂಗಳನ ಮೇಲೆ ಬೆಳಕು ಬೀಳುತ್ತಿದೆ' ಎಂದು ಅವರು ಬರೆದಿದ್ದಾರೆ. ಕೆಂಪು ಗ್ರಹದ ಮೇಲೆ ಮನುಷ್ಯರ ಪ್ರವೇಶದ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ ಎಂದು ಅನೇಕ ಜನರು ಇದನ್ನು ನೋಡುತ್ತಿದ್ದಾರೆ.


ಇದನ್ನೂ ಓದಿ-Baba Vanga Prediction: ಎಚ್ಚರ! ಮುಂದಿನ 3 ತಿಂಗಳುಗಳಲ್ಲಿ ನಿಜ ಸಾಬೀತಾಗಲಿವೆ ಈ 4 ಭವಿಷ್ಯಗಳು!


'ಪೋಪ್ ಬದಲಾವಣೆ'
ಪೋಪ್ ಬದಲಾವಣೆ ಕೂಡ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳಲ್ಲಿ ಒಂದಾಗಿದೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಜಾಗಕ್ಕೆ ಬೇರೊಬ್ಬರು ಬರಲಿದ್ದಾರೆ. ನಾಸ್ಟ್ರಾಡಾಮಸ್ ಪ್ರಕಾರ, ಪೋಪ್ ಫ್ರಾನ್ಸಿಸ್ ಕೊನೆಯ ನಿಜವಾದ ಪೋಪ್ ಆಗಿರುತ್ತಾರೆ. ಅವರ ಸ್ಥಾನವನ್ನು ಯಾರು ತೆಗೆದುಕೊಂಡರೂ ಅದು ದೊಡ್ಡ ಹಗರಣಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ-ಒಂದು ವೇಳೆ ಉಕ್ರೇನ್ ನ್ಯಾಟೋ ಪಡೆ ಸೇರಿದರೆ ಮೂರನೇ ಜಾಗತಿಕ ಯುದ್ಧ ಖಚಿತ...!


ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳಲ್ಲಿ ಆತಂಕಕಾರಿ ಭವಿಷ್ಯಗಳ ಜೊತೆಗೆ ಒಳ್ಳೆಯ ಭವಿಷ್ಯಗಳು ಕೂಡ ಇವೆ.  ಅವರ ಪ್ರಕಾರ 2022ರ ವೇಳೆಗೆ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಕಾಣಲಿದೆ. ಈ ಕಾರಣದಿಂದಾಗಿ, ಜನರ ಸರಾಸರಿ ವಯಸ್ಸು ಹೆಚ್ಚಾಗಲಿದೆ. ನಾಸ್ಟ್ರಾಡಾಮಸ್ ಅವರ ಪುಸ್ತಕ ಪ್ರೊಫೆಸೀಸ್ ಅನ್ನು ಓದುವ ಜನರ ಪ್ರಕಾರ, ಮಾನವ 200 ವರ್ಷಗಳವರೆಗೆ ಬದುಕಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.