ಸಿಯೋಲ್: "ಅಮೆರಿಕಾದ ಬಹುಪಾಲು ಭಾಗವನ್ನು ತಲುಪುವ ಶಕ್ತಿ ಇರುವ ಅಣ್ವಸ್ತ್ರಗಳು ನಮ್ಮ ಬಳಿಯಿದ್ದು, ಅಣ್ವಸ್ತ್ರದ ಬಟನ್ ನನ್ನ ಟೇಬಲ್ ಮೇಲೆಯೇ ಇದೆ" ಎಂದು ಯುದ್ಧೋದಾಹದಲ್ಲಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಮೆರಿಕಾಕ್ಕೆ ಎಚ್ಚರಿಕೆ ನೀಡುವ ಮೂಲಕ ವಿಶ್ವ ಮಟ್ಟದಲ್ಲಿ ಆತಂಕ ಉಂಟುಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಉತ್ತರ ಕೊರಿಯಾ ಜವಾಬ್ದಾರಿಯುತ ಹಾಗೂ ಶಾಂತಿ ಪ್ರಿಯ ದೇಶವಾಗಿದ್ದು, ಎಲ್ಲಿಯವರೆಗೆ ನಮ್ಮ ವಿರುದ್ಧ ಆಕ್ರಮಣಕಾರಿ ಮನೋಭಾವವಿರುವುದಿಲ್ಲವೋ ಅಲ್ಲಿಯವರೆಗೆ ನಾವೂ ಕೂಡ ಅಣ್ವಸ್ತ್ರಗಳನ್ನು ಬಳಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 


ಅಷ್ಟೇ ಅಲ್ಲದೆ, ಇದೇ ವೇಳೆ ಕಿಮ್‌ ಅವರು ತನ್ನ ದೇಶಕ್ಕೆ ಹೆಚ್ಚೆಚ್ಚು ಅಣ್ವಸ್ತ್ರಗಳು, ಖಂಡಾಂತರ ಅಣು ಕ್ಷಿಪಣಿಗಳು ಮತ್ತು ಸಮೂಹ ನಾಶಕ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ. 


ಕಳೆದ ವರ್ಷ ಪೂರ್ತಿ ಉತ್ತರ ಕೊರಿಯ ನಿರಂತರವಾಗಿ ತನ್ನ ಅಣ್ವಸ್ತ್ರಗಳನ್ನು ಪರೀಕ್ಷಿಸಿದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ಯಾಂಗ್‌ ಯಾಂಗನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದರು. ಆದರೆ ಅದರಿಂದ ಒಂದಿಷ್ಟೂ ಕಂಗೆಡದ ಕಿಮ್ ಅಮೇರಿಕ ಮತ್ತು ವಿಶ್ವಸಂಸ್ಥೆ ವಿರುದ್ಧ ತನ್ನ ವಿವಾದಿತ ಅನು ಯೋಜನೆಗಳನ್ನು ಮುಂದುವರೆಸಿದ್ದರು.


ಉತ್ತರ ಕೊರಿಯಾದ ಈ ನಡೆ ಇಡೀ ವಿಶ್ವದ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕ ತ್ತರ ಕೊರಿಯಾ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂಬ ಮಾತುಗಳು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರತೊಡಗಿವೆ.