Mobile Captures Missile Video: ಉಕ್ರೇನ್ ರಾಜಧಾನಿ ಕೀವ್ ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗಿದೆ. ಮೊಬೈಲ್ ಫೋನ್ ಕಣ್ಣುಗಳಲ್ಲಿ ಈ ವಿಡಿಯೋ ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಉಕ್ರೇನಿಯನ್ ಹುಡುಗಿಯೊಬ್ಬರು ವೀಡಿಯೊ ಕರೆ ಮೂಲಕ ನಗರದ ಸ್ಥಿತಿ ಕುರಿತು ಯಾರಿಗೋ ಮಾಹಿತಿ ನೀಡುತ್ತಿದ್ದಳು. ಅಷ್ಟರಲ್ಲಿಯೇ ರಷ್ಯಾ ಹಾರಿಬಿಟ್ಟ  ಕ್ಷಿಪಣಿಯು ಅವಳ ತಲೆಯ ಮೇಲಿಂದ ಹಾಯ್ದುಹೋಗಿದೆ ಮತ್ತು ಸ್ಫೋಟ ಸಂಭವಿಸಿದೆ. ಘಟನೆ ನಡೆದಾಗ ಹುಡುಗಿ ಕೀವ್‌ನ ವೊಲೊಡಿಮಿರ್ಸ್ಕಾ ಮತ್ತು ಶೆವ್ಚೆಂಕೊ ಸ್ಟ್ರೀಟ್‌ಗಳ ಕ್ರಾಸ್ ರೋಡ ನಲ್ಲಿದ್ದಳು ಎನ್ನಲಾಗಿದೆ. ಈ ಕ್ಷಿಪಣಿ ದಾಳಿ ಯುವತಿಯ ವಿಡಿಯೋ ಕರೆಯಲ್ಲಿ ಸೆರೆ ಸೆರೆಯಾಗಿದೆ. ಬಳಿಕ ಯುವತಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ.


ಉಕ್ರೇನಿಯನ್ ಮಿಲಿಟರಿಯ ಹೇಳಿಕೆಯ ಪ್ರಕಾರ, ಸೋಮವಾರ (ಅಕ್ಟೋಬರ್ 10) ರಷ್ಯಾ ಉಕ್ರೇನ್ ಮೇಲೆ 75 ಕ್ಷಿಪಣಿಗಳನ್ನು ಹಾರಿಸಿದ್ದು, ಅದರಲ್ಲಿ 40 ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ದಾಳಿಯನ್ನು ಖಂಡಿಸಿದ್ದಾರೆ, ಕೀವ್, ಡ್ನಿಪ್ರೊ ಮತ್ತು ಎಲ್ವಿವ್ ದಾಳಿಗಳಲ್ಲಿ ಇರಾನ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಉಕ್ರೇನ್‌ನಲ್ಲಿ ವಾಯುದಾಳಿ ಸೈರನ್‌ಗಳು ಕಡಿಮೆಯಾಗುತ್ತಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ದುರದೃಷ್ಟವಶಾತ್ ಇಲ್ಲಿ ಜನರು ಸಾಯುತ್ತಿದ್ದಾರೆ ಮತ್ತು ಗಾಯಗೊಲ್ಲುತ್ತಿದ್ದರೆ. ಸುರಕ್ಷಿತ ಸ್ಥಳಗಳನ್ನು ಬಿಟ್ಟು ಹೊರಬೀಳದಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ. ರಷ್ಯಾ ಉಕ್ರೇನ್ ಅನ್ನು ಭೂಪಟದಿಂದಲೇ ಅಳಿಸಿಹಾಕಲು ಬಯಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


ಸೋಮವಾರ ನಡೆದ ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಐವರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಷ್ಟ್ರೀಯ ಪೊಲೀಸ್ ಸೇವೆ ತಿಳಿಸಿದೆ. ಹೆಚ್ಚಿನ ದಾಳಿಗಳನ್ನು ಕೀವ್‌ನಲ್ಲಿ ನಡೆಸಲಾಗಿದೆ ಮತ್ತು ರಾಜಧಾನಿಯ ಕೇಂದ್ರವನ್ನು ಗುರಿಯಾಗಿಸಲಾಗಿದೆ.


ಇದನ್ನೂ ಓದಿ-Russia Ukraine War: ಉಕ್ರೇನ್ ಮೇಲೆ ರಷ್ಯಾದ ಇದುವರೆಗಿನ ಅತಿ ದೊಡ್ಡ ದಾಳಿ


ಕ್ರೈಮಿಯಾ ಸೇತುವೆ ಸ್ಫೋಟಕ್ಕೆ ಸೇಡು ತೀರಿಸಿಕೊಂಡ ಪುಟಿನ್?
ಮೂರು ದಿನಗಳ ಹಿಂದೆ, ರಷ್ಯಾ ಆಕ್ರಮಿತ ಕ್ರಿಮಿಯನ್ ಪರ್ಯಾಯ ದ್ವೀಪದಲ್ಲಿ ಸೇತುವೆಯ ಮೇಲೆ ಸ್ಫೋಟಕ ತುಂಬಿದ ವಾಹನವು ಸ್ಫೋಟಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಇದರಲ್ಲಿ ಮೂವರು ಸಾವನ್ನಪ್ಪಿದ್ದು, ಸೇತುವೆಯ ಕೆಲ ಭಾಗ ಕುಸಿದು ಬಿದ್ದಿದೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ, ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ಆರೋಪಿಸಿದ್ದು, ಇದೊಂದು ಭಯೋತ್ಪಾದಕ ಘಟನೆ ಎಂದು ಕರೆದಿದ್ದಾರೆ.


ಇದನ್ನೂ ಓದಿ-Video: ಪಾಕ್ ನಲ್ಲಿ ಮಾಲ್‌ ಗೆ ವ್ಯಾಪಿಸಿದ ಭಾರಿ ಬೆಂಕಿ


ಕ್ರೈಮಿಯಾ ಸೇತುವೆಯ ಬಾಂಬ್ ಸ್ಫೋಟದ ಮರುದಿನ ಜಪೋರಿಜಿಯಾದ ಬಹುಮಹಡಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ, ಇದರಲ್ಲಿ 17 ಜನ ಸಾವನ್ನಪ್ಪಿದ್ದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸೋಮವಾರ, ಪುಟಿನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ, ಕೀವ್ ಮತ್ತು ಹಲವಾರು ಉಕ್ರೇನಿಯನ್ ನಗರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.