Cheapest Homes On Sale - ಕೇವಲ 100 ರೂ.ಗಳಿಗೆ ಇಟಲಿಯಲ್ಲಿ ಮನೆ ಖರೀದಿಸುವ ಸುವರ್ಣಾವಕಾಶ
Cheapest Homes On Sale - ಒಂದು ಕಾಲದಲ್ಲಿ Biccariಯಲ್ಲಿ 5000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಆದರೆ, ಇದೀಗ ಈ ಸಂಖ್ಯೆ 2000 ಕ್ಕೆ ಇಳಿದಿದೆ ಎಂದು ಮೇಯರ್ ಹೇಳಿದ್ದಾರೆ. ಉದ್ಯೋಗಗಳು ಅಥವಾ ಇತರ ಕಾರಣಗಳಿಂದ ಜನರು ಇಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಈ ಮೊದಲು ಅವರು ರಜಾದಿನಗಳಲ್ಲಿ ಇಲ್ಲಿಗೆ ಬರುತ್ತಿದ್ದರು. ಆದರೆ ಈಗ ಅವರು ನಗರದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಇದರಿಂದಾಗಿ ಅನೇಕ ಮನೆಗಳು ಖಾಲಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೋಮ್: Cheapest Homes On Sale - ಒಂದು ವೇಳೆ ನೀವೂ ಕೂಡ ಇಟಲಿಯಲ್ಲಿ ಮನೆ ಖರೀದಿಸಲು ಬಯಸುತ್ತಿದ್ದರೆ, ಇದಕ್ಕಿಂತ ಉತ್ತಮ ಅವಕಾಶ ನಿಮಗೆ ಸಿಗುವುದಿಲ್ಲ. ಏಕೆಂದರೆ ನಿಮ್ಮ ಊಹೆಗೂ ಮೀರಿ ಅಗ್ಗದ ದರದಲ್ಲಿ ಇಲ್ಲಿ ಮನೆಗಳು ಸಿಗುತ್ತಿವೆ. ಆದರೆ, ಮನೆಗಳು ತುಂಬಾ ಹಳೆಯದಾಗಿದ್ದು, ಅವುಗಳನ್ನು ನವೀಕರಿಸುವ ಅಗತ್ಯವಿದೆ. ಪುಗ್ಲಿಯಾದ ಆಗ್ನೇಯ ಭಾಗದಲ್ಲಿರುವ Biccariಯಲ್ಲಿ ಈ ಮನೆಗಳು ಮಾರಾಟಕ್ಕಿವೆ. ಇಲ್ಲಿನ ಮೇಯರ್ ಆಗಿರುವ ಜಿಯಾನ್ ಫಿಲಿಪೋ ಮಿಗ್ನೆಗನ್ ವಿಶೇಷ ಮಿಷನ್ ವೊಂದರ ಅಡಿ ಈ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಹಾಗೂ ಜನರ ಪಲಾಯನದಿಂದ ಖಾಲಿಯಾಗುತ್ತಿರುವ ಈ ಪಟ್ಟಣಕ್ಕೆ ಮರುಜೀವ ತುಂಬುವುದು ಅವರ ಮಿಷನ್ ಉದ್ದೇಶ.
Job ಹಿನ್ನೆಲೆ ಪಟ್ಟಣ ತೊರೆಯುತ್ತಿರುವ ಜನ
Biccari (Italy)ಯಲ್ಲಿ ಖಾಲಿ ಇರುವ ಮನೆಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಆದರೆ, ಇವುಗಳಲ್ಲಿ ಅತಿ ಹಳೆಯಾಗಿರುವ ಮನೆಗಳನ್ನು ಕೇವಲ 1 ಯುರೋ (88 ರೂ.ಗಳು)ಗೆ ಮಾರಾಟ ಮಾಡಲಾಗುತ್ತಿದೆ. ನೌಕರಿ ಹಾಗೂ ಇತರೆ ಕಾರಣಗಳಿಂದ ಇಲ್ಲಿನ ಜನರು ಬೇರೆ ಸ್ಥಳಗಳಿಗೆ ಅದರಲ್ಲೂ ವಿಶೇಷವಾಗಿ ಅಮೇರಿಕಾಗೆ ಸ್ಥಳಾಂತರಗೊಂಡಿದ್ದಾರೆ. ಈ ಕಾರಣದಿಂದ ಈ ಪಟ್ಟಣ ಖಾಲಿಯಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಮೇಯರ್ ಜಿಯಾನ್ ಫಿಲಿಪೋ ಮಿಗ್ನೆಗನ್ (Gianfilippo Mignogna) ವಿಶೇಷ ಆಫರ್ ಅಡಿ ಮನೆಗಳನ್ನು ಮಾರಾಟ ಮಾಡುವ ಪ್ಲಾನ್ ಸಿದ್ಧಪಡಿಸಿದ್ದಾರೆ.
ಇದನ್ನು ಓದಿ- Tiger Laughing Video: ತರಬೇತುದಾರನ ಕಚಗುಳಿಗೆ ನಕ್ಕ ಹುಲಿ!
ಸದ್ಯ ಕೇವಲ 2000 ಜನರು ಮಾತ್ರ ಈ ಊರಲ್ಲಿ ಉಳಿದಿದ್ದಾರೆ
ಒಂದು ಕಾಲದಲ್ಲಿ Biccariಯಲ್ಲಿ 5000 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರು. ಆದರೆ, ಇದೀಗ ಈ ಸಂಖ್ಯೆ 2000 ಕ್ಕೆ ಇಳಿದಿದೆ ಎಂದು ಮೇಯರ್ ಹೇಳಿದ್ದಾರೆ. ಉದ್ಯೋಗಗಳು ಅಥವಾ ಇತರ ಕಾರಣಗಳಿಂದ ಜನರು ಇಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಈ ಮೊದಲು ಅವರು ರಜಾದಿನಗಳಲ್ಲಿ ಇಲ್ಲಿಗೆ ಬರುತ್ತಿದ್ದರು. ಆದರೆ ಈಗ ಅವರು ನಗರದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಇದರಿಂದಾಗಿ ಅನೇಕ ಮನೆಗಳು ಖಾಲಿಯಾಗಿವೆ. ಪ್ರಾಪರ್ಟಿ ಹಾಗೂ ಅವುಗಳ ಭಾವಚಿತ್ರಗಳನ್ನು ಶೀಘ್ರದಲ್ಲಿಯೇ ಟೌನ್ ಹಾಲ್ ವೆಬ್ ಸೈಟ್ ಮೇಲೆ ಪೋಸ್ಟ್ ಮಾಡಲಾಗುವುದು. ಆದರೆ, ಮನೆ ಖರೀದಿಸಲು ಬಯಸುವವರು ಮೇಯರ್ ಅವರ ಅಧಿಕೃತ ಇ-ಮೇಲ್ ಮೇಲೂ ಕೂಡ ಸಂಪರ್ಕ ಸಾಧಿಸಬಹುದಾಗಿದೆ.
ಇದನ್ನು ಓದಿ- Bitumi Mama - 23 ವರ್ಷದ ಈ 11 ಮಕ್ಕಳ ಮಹಾತಾಯಿಗೆ 100 ಮಕ್ಕಳಿಗೆ ತಾಯಿಯಾಗುವ ಮಹದಾಸೆ
ಗ್ಯಾರಂಟಿ ನೀಡಬೇಕು
ಮನೆಗಳ ಮಾರಾಟಕ್ಕೆ ಒಟ್ಟು ಎರಡು ಸ್ಕೀಮ್ ಗಳನ್ನು ಮೇಯರ್ ಸಿದ್ಧಪಡಿಸಿದ್ದಾರೆ. ಮೊದಲ ಸ್ಕೀಮ್ ನಲ್ಲಿ ಮನೆಗಳ ಬೆಲೆ ಒಂದು ಯುರೋ ಆಗಿದೆ. ಎರಡನೇ ಸ್ಕೀಮ್ ನಲ್ಲಿ ಇದಕ್ಕಿಂತಲೂ ಬೆಲೆ ಕಡಿಮೆಯಾಗಿದೆ. 1 ಯುರೋ ಮೊತ್ತದಲ್ಲಿ ಮನೆ ಖರೀದಿಸಲು ಬಯಸುವವರು ಮೊದಲು 3000 ಯುರೋ ಮೊತ್ತವನ್ನು ಗ್ಯಾರಂಟಿ ರೂಪದಲ್ಲಿ ಜಮಾ ಮಾಡಬೇಕು. ಮನೆಯ ರಿಪೇರಿ ಕೆಲಸ ಇತ್ಯಾದಿಗಳನ್ನು ಮಾಡಿದ ಬಳಿಕ ಈ ಮೊತ್ತವನ್ನು ಅವರಿಗೆ ಹಿಂದಿರುಗಿಸಲಾಗುವುದು. Biccari ಒಂದು ಸುಂದರ ಹಾಗೂ ಮಹತ್ವಪೂರ್ಣ ಸ್ಥಾನದಲ್ಲಿದೆ. ಈ ಪಟ್ಟಣಕ್ಕೆ ಹೊಂದಿಕೊಂಡಂತೆ ಪುಗ್ಲಿಯಾ, ಮೊಲಿಜಾ ಹಾಗೂ ಕ್ಯಾಂಪನಿಯಾನಿಯಾ ಗಡಿಗಳಿವೆ. ಇಲ್ಲಿಂದ ಸುಂದರ ನದಿ ಹಾಗೂ ಪರ್ವತ ಶ್ರೇಣಿಗಳನ್ನು ನೀವು ನೋಡಬಹುದು.
ಇದನ್ನು ಓದಿ-Honda Dhamaka Offer: ರೂ.5000 ಕ್ಯಾಶ್ ಬ್ಯಾಕ್ ನೊಂದಿಗೆ Activa 6G ಮನೆಗೆ ತೆಗೆದುಕೊಂಡು ಹೋಗಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.