ಈ ದೇಶದಲ್ಲಿ ಲೀಟರ್‌ಗೆ 290 ರೂ. ತಲುಪಿದ ಪೆಟ್ರೋಲ್
Petrol Price In Pakistan: ಯಾವುದೇ ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿನ ಏರಿಕೆ ನೇರವಾಗಿ ಗ್ರಾಹಕರ ಮೇಲೆ ಪರಿಣಾಮವನ್ನು ಬೀರುತ್ತದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗೆ ತಲುಪಿದೆ. ಆದರೆ, ನಮ್ಮ ನೆರೆಯ ದೇಶದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂದು ತಿಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ...
Petrol Price In Pakistan: ದೇಶದಲ್ಲಿ ಹಣದುಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ದರವೂ ಗಗನಾಮುಖಿ ಆಗಿದ್ದು 100ರ ಗಡಿ ದಾಟುತ್ತಿದೆ. ಆದರೆ, ನಮ್ಮ ನೆರೆಯ ದೇಶ ಪಾಕಿಸ್ತಾನದಲ್ಲಿ ಸ್ಥಿತಿ ಹೇಗಿದೆ ಗೊತ್ತಾ..! ವಿನಾಶದ ಅಂಟ್ನಲ್ಲಿ ಸಾಗಿರುವ ಪಾಕಿಸ್ತಾನದಲ್ಲಿ ಸದ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಘೋಷಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 300 ರೂ.ಗಳ ಸನಿಹದಲ್ಲಿದೆ.
ಹೌದು, ಮಂಗಳವಾರ (ಆಗಸ್ಟ್ 15, 2023) ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಘೋಷಿಸಲಾಗಿದೆ. ಜಾಗತಿಕ ಸಾಲದಾತರೊಂದಿಗೆ ಒಪ್ಪಂದದಲ್ಲಿ ನಿಗದಿಪಡಿಸಿದ ಹಣಕಾಸಿನ ಉದ್ದೇಶಗಳನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವನ್ನು ಘೋಷಿಸಿರುವುದಾಗಿ ಪಾಕಿಸ್ತಾನದ ಹಣಕಾಸು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ- ಭಾರತಕ್ಕೆ ಎಸ್ 400 ಕ್ಷಿಪಣಿ ನೀಡಿದ ರಷ್ಯಾ, ಹೆಚ್ಚಾಯ್ತು ಚೀನಾ - ಪಾಕ್ ಆತಂಕ
300 ರೂ. ಗಡಿ ಸಮೀಪಿಸಿದ ಪೆಟ್ರೋಲ್-ಡೀಸೆಲ್:
ಪಾಕಿಸ್ತಾನದಲ್ಲಿ ಆಗಸ್ಟ್ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಈ ಬಾರಿ ಒಮ್ಮೆಗೆ ಬರೋಬ್ಬರಿ ಪೆಟ್ರೋಲ್ ಬೆಲೆ ಲೀಟರ್‌ಗೆ 17.50ರೂ. ಏರಿಕೆ ಆಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ 290.45 ರೂ.ಗಳನ್ನು ತಲುಪಿದೆ. ಇದೇ ವೇಳೆ ಡೀಸೆಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹೆಚ್ಚಿಸಲಾಗಿದ್ದು ಇದರೊಂದಿಗೆ ಪ್ರತಿ ಲೀಟರ್ ಡೀಸೆಲ್ ದರ 293.40 ರೂಪಾಯಿಗೆ ಏರಿಕೆ ಆಗಿದೆ.
ಈ ಹೊಸ ದರಗಳು ಇಂದಿನಿಂದ ಎಂದರೆ ಆಗಸ್ಟ್ 16, 2023 ಬುಧವಾರದಿಂದ ಜಾರಿಗೆ ಬರಲಿವೆ. ಆದಾಗ್ಯೂ, ಪಾಕಿಸ್ತಾನ ಸರ್ಕಾರವು ಸೀಮೆ ಎಣ್ಣೆ ಮತ್ತು ಲಘು ಡೀಸೆಲ್ ತೈಲ (ಎಲ್‌ಡಿಒ) ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಘೋಷಿಸಲಿಲ್ಲ. ಹಾಗಾಗಿ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ- Viral News: ಮಹಿಳೆಯ ಹೊಟ್ಟೆಯಲ್ಲಿ ಹೆಬ್ಬಾವಿನ ಆಕಾರದ 20 ಕೆಜಿ ಮಲ ಪತ್ತೆ..!
ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ:
ನವದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಕಳೆದ ಒಂದು ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುತೇಕ ಒಂದೇ ಆಗಿವೆ. ಬಹುತೇಕ ನಗರಗಳಲ್ಲಿ ಬುಧವಾರವೂ ಇಂಧನ ಬೆಳೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇಂದು ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ.ಗೆ ಲಭ್ಯವಿದೆ.
ಗುಜರಾತ್, ಮಹಾರಾಷ್ಟ್ರದಲ್ಲಿ ಅಗ್ಗವಾದ ಇಂಧನ:
ಗುಜರಾತ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು 70 ಪೈಸೆ ಅಗ್ಗವಾಗಿ ಮಾರಾಟ ಮಾಡಲಾಗುತ್ತಿದೆ. ಗಮನಾರ್ಹವಾಗಿ, ಇದೇ ವೇಳೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್ 49 ಪೈಸೆ ಮತ್ತು ಡೀಸೆಲ್ 47 ಪೈಸೆಗಳಷ್ಟು ಅಗ್ಗವಾಗಿದೆ. ಮಹಾರಾಷ್ಟ್ರದ ಹೊರತಾಗಿ ಜಾರ್ಖಂಡ್‌ನಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.