ನವದೆಹಲಿ: ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವ ಕುರಿತಾಗಿ ನಿರ್ಣಯವನ್ನು ಜಾರಿ ಮಾಡಿದ ಎರಡು ದಿನಗಳ ನಂತರ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್ ಆ ಪ್ರಶಸ್ತಿಗೆ ತಾವು ಅರ್ಹರಲ್ಲ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ಮುಂದುವರೆದು ಕಾಶ್ಮೀರದ ಸಮಸ್ಯೆಯನ್ನು ಅಲ್ಲಿನ ಜನರ ಆಶಯದಂತೆ ಬಗೆ ಹರಿಸಿ ಶಾಂತಿ ಮತ್ತು ಮಾನವ ಅಭಿವೃದ್ದಿ ಉಪಖಂಡದಲ್ಲಿ ನೆಲೆ ಗೊಳ್ಳುವಂತೆ ಮಾಡುವವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಲಿ ಎಂದು ತಿಳಿಸಿದ್ದಾರೆ.



ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು " ನಾನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹನಲ್ಲ. ಈ ಪ್ರಶಸ್ತಿಯನ್ನು ಕಾಶ್ಮೀರದ ಸಮಸ್ಯೆಯನ್ನು ಅಲ್ಲಿನ ಜನರ ಆಶಯದಂತೆ ಬಗೆ ಹರಿಸಿ ಶಾಂತಿ ಮತ್ತು ಮಾನವ ಅಭಿವೃದ್ದಿ ಉಪಖಂಡದಲ್ಲಿ ನೆಲೆ ಗೊಳ್ಳುವಂತೆ ಮಾಡುವ ವ್ಯಕ್ತಿಗೆ ದೊರೆಯಲಿ" ಎಂದು ಟ್ವೀಟ್ ಮಾಡಿದ್ದಾರೆ. 


ಮಾರ್ಚ್ 2 ರಂದು ಪಾಕ್ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶಾಂತಿಯ ಪ್ರತೀಕವಾಗಿ ಬಿಡುಗಡೆ ಮಾಡಿದ್ದ ಹಿನ್ನಲೆಯಲ್ಲಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಬೇಕೆಂದು ಅಲ್ಲಿನ ನಿರ್ಣಯವನ್ನು ಪ್ರಕಟಿಸಿತ್ತು.ಈ ಹಿನ್ನಲೆಯಲ್ಲಿ ಈಗ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.