ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಗಳಿಗೆ ಶಾಂತಿಯುತವಾದ ಮಾತುಕತೆ ಪರಿಹಾರ ನೀಡಬಲ್ಲದು ಎಂದು ಚೀನಾ ಅಭಿಪ್ರಾಯ ಪಟ್ಟಿದೆ.


COMMERCIAL BREAK
SCROLL TO CONTINUE READING

ಚೀನಾದ ವಿದೇಶಿ ವಕ್ತಾರ ಹುವಾ ಚುನ್ಯುಂಗ್ ಇತ್ತೀಚಿಗೆ ಎರಡು ದೇಶಗಳ ನಡುವೆ ಉಂಟಾದ ಘರ್ಷಣೆಯ ಬಗ್ಗೆ ಇಲ್ಲಿನ ಮಾದ್ಯಮಗಳೊಂದಿಗೆ ಮಾತನಾಡುತ್ತಾ  ಎರಡು ದೇಶಗಳು ಈ ಪ್ರದೇಶದಲ್ಲಿ ಶಾಂತಿ ನೆಲೆಯೂರಲು ಎರಡು ದೇಶಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.


ನೆರೆಯ ಮಿತ್ರ ದೇಶಗಳಾಗಿರುವ ಭಾರತ ಮತ್ತು ಪಾಕಿಸ್ತಾನ ನಿರಂತರ ಮಾತುಕತೆ ಮೂಲಕ ತಮ್ಮ ಸಮಸ್ಯೆ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಆ ಮೂಲಕ ದಕ್ಷಿಣ ಎಶಿಯಾ ಪ್ರದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು ಎಂದರು. 


ಇತ್ತೀಚೆಗೆ ಗಡಿ ಪ್ರದೇಶದಲ್ಲಿ  ಭಾರತವು ಪಾಕಿಸ್ತಾನದ ಮೂವರು ಸೈನಿಕರನ್ನು ಗಡಿಯಲ್ಲಿನ ಘರ್ಷಣೆ ವೇಳೆ ಹತ್ಯೆಮಾಡಿತ್ತು ಈ ಹಿನ್ನಲೆಯಲ್ಲಿ ಈ ಚೀನಾದ ಹೇಳಿಕೆ ಬಂದಿರುವುದು ಅತ್ಯಂತ ಮಹತ್ವ ಪಡೆದಿದೆ.