ಜಿನೇವಾ: ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನಾ ವೈರಸ್ ಕುರಿತಂತೆ ಜನರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಕರೋನಾ ವೈರಸ್ ಒಂದು ಹವಾಮಾನ ಸಂಬಂಧಿತ ಕಾಯಿಲೆಯಾಗಿದೆ ಎಂದು ಜನರು ಯಾವುದೇ ರೀತಿಯ ತಪ್ಪು ಕಲ್ಪನೆಯಲ್ಲಿ ಬದುಕಬಾರದು ಎಂದು WHO ಹೇಳಿದೆ. ಇದು ಹವಾಮಾನದ ಋತುಗಳು ಬದಲಾದಂತೆ ಕಡಿಮೆಯಾಗುತ್ತದೆ ಎಂದು ಜನರು ಭಾವಿಸಬಾರದು, ಇದಕ್ಕೆ ಸಂಬಂಧಿಸಿದಂತೆ ವರ್ಚುವಲ್ ಬ್ರಿಫಿಂಗ್ ನಲ್ಲಿ ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಮಾರ್ಗರೇಟ್ ಹ್ಯಾರಿಸ್, ಕರೋನಾ ವೈರಸ್ ಸಾಂಕ್ರಾಮಿಕವು ಒಂದು ದೊಡ್ಡ ಅಲೆಯಾಗಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಉತ್ತರ ಗೋಳಾರ್ಧದಲ್ಲಿ ಬೇಸಿಗೆಯಲ್ಲಿ ವೈರಸ್ ಬಗ್ಗೆ ಯಾವುದೇ ನಿರ್ಲಕ್ಷ್ಯ ಸರಿಯಲ್ಲ ಎಂದು ಹ್ಯಾರಿಸ್ ಎಚ್ಚರಿಸಿದ್ದಾರೆ. ಕರೋನಾ ವೈರಸ್ ಯಾವುದೇ ಸಾಮಾನ್ಯ ಇನ್ಫ್ಳುಯೆನ್ಸಾ ರೀತಿಯ ಕಾಯಿಲೆಯಲ್ಲ, ಹವಾಮಾನ ಬದಲಾದಂತೆ ಇದರ ಪ್ರಭಾವ ಕಡಿಮೆಯಾಗುತ್ತದೆ ಎಂದು ಭಾವಿಸಬಾರದು ಎಂದು ಹ್ಯಾರಿಸ್ ಹೇಳಿದ್ದಾರೆ.


ಹಾಂಗ್ ಕಾಂಗ್ ನಲ್ಲಿ ಎರಡನೇ ಬಾರಿಗೆ ಕೊರೊನಾ ವೈರಸ್ ಪ್ರಕರಣಗಳಲ್ಲಿ ಹೆಚ್ಚಳ
ಹಾಂಗ್ ಕಾಂಗ್‌ನಲ್ಲಿ ಎರಡನೆಯ ಬಾರಿಗೆ ಹೆಚ್ಚಾಗುತ್ತಿರುವ ಕರೋನಾ ವೈರಸ್ ಪ್ರಕರಣಗಳ ಬಗ್ಗೆಯೂ ಕೂಡ ಡಬ್ಲ್ಯುಎಚ್‌ಒ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ವೈರಸ್ ಮಾನವರ ನಿಯಂತ್ರಣ ಮೀರಿದೆ ಎಂದು ಅವರು ಹೇಳಿದ್ದಾರೆ. ಆದರೂ ನಾವು ಅದನ್ನು ಹರಡುವುದನ್ನು ತಡೆಯಬಹುದು. ಕರೋನಾ ವೈರಸ್‌ನ ಮೊದಲ ಅಲೆಯೊಂದಿಗೆ ನಾವು ಇನ್ನೂ ಹೆಣಗಾಡುತ್ತಿದ್ದೇವೆ ಎಂದು ಹ್ಯಾರಿಸ್ ಹೇಳಿದ್ದಾರೆ. ಇದು ಒಂದು ದೊಡ್ಡ ಅಲೆಯಾಗಿದ್ದು, ಏರಿಳಿತಗಳನ್ನು ಕಾಣುತ್ತಿದೆ. ಈ ವಕ್ರ ಅಲೆಯ ರೇಖೆಯನ್ನು ನಾವು ಸಮತಟ್ಟಾಗಿಸಬಹುದು ಎಂಬುದು ಇಲ್ಲಿ ಒಳ್ಳೆಯ ಸುದ್ದಿ.