`ವ್ಯತ್ಯಾಸಗಳು ವಿವಾದಗಳಾಗಬಾರದು` ಚೀನಾಗೆ ಭಾರತದ ಪ್ರತಿಕ್ರಿಯೆ
ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂದು ಚೀನಾಕ್ಕೆ ನಿರ್ಣಾಯಕ ಸಂದೇಶ ರವಾನಿಸಿದ್ದಾರೆ.ಜಮ್ಮು ಕಾಶ್ಮೀರದ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಸ್ಪಷ್ಟೀಕರಣ ನೀಡಿರುವ ಭಾರತ, ಈಗ ಮಾಡಿರುವ ಬದಲಾವಣೆಗಳೆಲ್ಲವೂ ಸಹಿತ ಆಂತರಿಕ ಬದಲಾವಣೆಗಳು ಎಂದು ಹೇಳಿದೆ.
ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಇಂದು ಚೀನಾಕ್ಕೆ ನಿರ್ಣಾಯಕ ಸಂದೇಶ ರವಾನಿಸಿದ್ದಾರೆ.ಜಮ್ಮು ಕಾಶ್ಮೀರದ ವಿಚಾರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಗೆ ಸ್ಪಷ್ಟೀಕರಣ ನೀಡಿರುವ ಭಾರತ, ಈಗ ಮಾಡಿರುವ ಬದಲಾವಣೆಗಳೆಲ್ಲವೂ ಸಹಿತ ಆಂತರಿಕ ಬದಲಾವಣೆಗಳು ಎಂದು ಹೇಳಿದೆ.
ಇಂದು ಬೀಜಿಂಗ್‌ನಲ್ಲಿ ಚೀನಾದ ವಾಂಗ್ ಯಿ ಅವರೊಂದಿಗಿನ ಸಭೆಯಲ್ಲಿ ಜೈಶಂಕರ್ ಮಾತನಾಡಿ 'ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ವಿವಾದಗಳಾಗಬಾರದು ಎನ್ನುವುದನ್ನು ಉಭಯ ದೇಶಗಳು ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು. ಭಾರತ-ಚೀನಾ ಸಂಬಂಧ ಜಾಗತಿಕ ರಾಜಕೀಯದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ ಎರಡು ವರ್ಷಗಳ ಹಿಂದೆ, ನಮ್ಮ ನಾಯಕರು ಆ ವಾಸ್ತವವನ್ನು ಗುರುತಿಸಿದರು ಮತ್ತು ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಭಾರತ-ಚೀನಾ ಸಂಬಂಧವು ಸ್ಥಿರತೆಯ ಅಂಶವಾಗಿರಬೇಕು ಎಂದು ಅಸ್ತಾನದಲ್ಲಿನ ಒಮ್ಮತದ ಮೂಲಕ ಕಂಡುಕೊಂಡಿತ್ತು ಎಂದರು.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಲು ಮತ್ತು ಅದನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಚೀನಾ ತನ್ನ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವ ಮತ್ತು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವ ಕ್ರಮಗಳನ್ನು ಉಭಯ ರಾಷ್ಟ್ರಗಳು ತಪ್ಪಿಸಬೇಕು ಎಂದು ಚೀನಾ ಈ ಸಂದರ್ಭದಲ್ಲಿ ಸಲಹೆ ನೀಡಿತು.
ಕಾಶ್ಮೀರದ ಕುರಿತ ನಿರ್ಧಾರಗಳು ಭಾರತದ ಭೂಪ್ರದೇಶಕ್ಕೆ ಸಂಬಂಧಿಸಿದ ಆಂತರಿಕ ವಿಷಯವಾಗಿದೆ.ಭಾರತವು ಇತರ ದೇಶಗಳ ಆಂತರಿಕ ವ್ಯವಹಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಇತರ ದೇಶಗಳು ಸಹ ಇದೇ ರೀತಿ ಮಾಡಬೇಕೆಂದು ನಿರೀಕ್ಷಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.