ನವದೆಹಲಿ: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಸಂಭವಿಸಿರುವ 6.3 ತೀವ್ರತೆಯ ಭೂಕಂಪಕ್ಕೆ 2,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಶನಿವಾರ ಪ್ರಬಲ ಭೂಕಂಪದ ಪರಿಣಾಮ ಪಶ್ಚಿಮ ಅಫ್ಘಾನಿಸ್ತಾನ ತತ್ತರಿಸಿ ಹೋಗಿತ್ತು. ಇದು ಕಳೆದ 2 ದಶಕಗಳಲ್ಲಿಯೇ ದೇಶಕ್ಕೆ ಅಪ್ಪಳಿಸಿದ ಅತ್ಯಂತ ಭೀಕರ ಭೂಕಂಪಗಳಲ್ಲಿ ಒಂದಾಗಿದೆ.


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ 320 ಜನರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯು ಆರಂಭದಲ್ಲಿ ಪ್ರಾಥಮಿಕ ಅಂಕಿಅಂಶಗಳ ಮೂಲಕ ತಿಳಿಸಿತ್ತು. ಆದರೆ ಭಾನುವಾರ ಈ ಮಾರಣಾಂತಿಕ ಭೂಕಂಪವು 1,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಜೆರುಸಲೇಮ್ ಮೇಲೆ ಹಮಾಸ್ ಉಗ್ರದಾಳಿ: ಇಸ್ರೇಲ್ - ಪ್ಯಾಲೆಸ್ತೀನ್ ಕದನದ ಮಧ್ಯೆ ಭಾರತದ ಸಂಕೀರ್ಣ ಪಾತ್ರ ಮತ್ತು ಪರಿಣಾಮಗಳು


ಹೆರಾತ್ ಪ್ರಾಂತ್ಯದ ಜೆಂಡಾಜಾನ್ ಜಿಲ್ಲೆಯ ಸುಮಾರು 6 ಗ್ರಾಮಗಳು ಭೂಕಂಪದ ಹೊಡೆತಕ್ಕೆ ನಾಶವಾಗಿವೆ. ನೂರಾರು ಜನರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ವಿಪತ್ತು ಪ್ರಾಧಿಕಾರದ ವಕ್ತಾರ ಮೊಹಮ್ಮದ್ ಅಬ್ದುಲ್ಲಾ ಜಾನ್ ತಿಳಿಸಿದ್ದಾರೆ. ಭೂಕಂಪದ ಹೊಡೆತಕ್ಕೆ ಸುಮಾರು 465ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 135ಕ್ಕೂ ಹೆಚ್ಚು ಮನೆಗಳಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 2,053ಕ್ಕೆ ಏರಿಕೆ-9000 ಮಂದಿಗೆ ಗಂಭೀರ ಗಾಯ


ನೂರಾರು ಜನರು ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿದ್ದು, ಅವರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ದುರಂತದಲ್ಲಿ ಸಾವನಿ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ 40 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ 6.3, 5.9 ಮತ್ತು 5.5 ತೀವ್ರತೆಯ 3 ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ವರದಿಯಾಗಿದೆ. ನಗರದಲ್ಲಿ ಮಧ್ಯಾಹ್ನದ ವೇಳೆ ಕನಿಷ್ಠ 5 ಪ್ರಬಲ ಕಂಪನಗಳು ಸಂಭವಿಸಿವೆ ಎಂದು ಹೆರಾತ್ ನಿವಾಸಿ ಅಬ್ದುಲ್ ಶಕೋರ್ ಸಮಾದಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.