Afghanistan crisis: ಕಾಬೂಲ್‌ನಿಂದ ವಾಯುಪಡೆ ವಿಮಾನದಲ್ಲಿ 85ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ
ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ.
ಕಾಬೂಲ್: ಅಫ್ಘಾನಿಸ್ತಾನದಿಂದ ಇಂದು (ಆಗಸ್ಟ್ 21) 85ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. 85ಕ್ಕೂ ಹೆಚ್ಚು ಭಾರತೀಯರಿದ್ದ ಭಾರತೀಯ ವಾಯುಪಡೆ(Indian Air Force)ಯ C-130J ವಿಶೇಷ ವಿಮಾನವು ಕಾಬೂಲ್‌ನಿಂದ ಪ್ರಯಾಣಿಸಿದೆ ಅಂತಾ ತಿಳಿದುಬಂದಿದೆ. ಈ ವಿಮಾನವು ಇಂಧನ ತುಂಬಿಸುವುದಕ್ಕಾಗಿ ತಜಕಿಸ್ತಾನದಲ್ಲಿ ಲ್ಯಾಂಡ್ ಆಗಿತ್ತು. ಕಾಬೂಲ್(Kabul)ನಲ್ಲಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಸರ್ಕಾರಿ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಅಂತಾ ಮೂಲಗಳು ತಿಳಿಸಿವೆ.
ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ಕಾರವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ತಾಲಿಬಾನ್ ಭಯೋತ್ಪಾದಕರು(Taliban Militants) ಇಡೀ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ ಬಳಿಕ ಭಾರತವು ತನ್ನ ಕಾನ್ಸುಲೇಟ್ ಸಿಬ್ಬಂದಿಯನ್ನು ಕಂದಹಾರ್‌ನಿಂದ ಈ ಹಿಂದೆ ಕರೆಸಿಕೊಂಡಿತ್ತು. ಈ ಮೊದಲು ಕಂದಹಾರ್ ದೂತಾವಾಸದಲ್ಲಿದ್ದ ಭಾರತೀಯ ಅಧಿಕಾರಿಗಳು ನಂತರ ಕಾಬೂಲ್ ರಾಯಭಾರ ಕಚೇರಿಗೆ ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: "ಇತಿಹಾಸದಲ್ಲಿಯೇ ಕಾಬೂಲ್ ಸ್ಥಳಾಂತರ ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್‌ಗಳಲ್ಲಿ ಒಂದು"
ಆಗಸ್ಟ್ 15 ರಂದು ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್ ವಶ(Fall of Kabul)ಪಡಿಸಿಕೊಂಡ ನಂತರ ಭಾರತೀಯ ವಾಯುಪಡೆಯು ಸಿ -17 ಗ್ಲೋಬ್‌ಮಾಸ್ಟರ್‌ನ 2 ವಿಮಾನಗಳಲ್ಲಿ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಪಡೆಗಳ ಅನುಮತಿಯೊಂದಿಗೆ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಮತ್ತು ಕೆಲ ಪತ್ರಕರ್ತರನ್ನು ಮರಳಿ ದೇಶಕ್ಕೆ ಕರೆತರಲಾಗಿದೆ. ಭಾರತೀಯ ವಾಯುಪಡೆಯು ಈಗಾಗಲೇ ಸುಮಾರು 180ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರನ್ನು ಸ್ಥಳಾಂತರಿಸಿದೆ.
Taliban Militants) ಅಧ್ಯಕ್ಷೀಯ ಅರಮನೆಯನ್ನೂ ತಮ್ಮ ಕೈವಶಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸಲಿದೆ ಎಂದು ಹೆದರಿರುವ ಅಫ್ಘಾನ್ ಪ್ರಜೆಗಳು ದೇಶಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಕೊಟ್ಟ ಆ ಐಡಿಯಾ ಏನು ಗೊತ್ತಾ?
ತಾಲಿಬಾನ್(Taliban)ನ ಕ್ರೂರ ಆಡಳಿತ ದೇಶದಲ್ಲಿ ಜಾರಿಯಾಗುವ ಸಾಧ್ಯತೆ ಹಿನ್ನೆಲೆ ಅಫ್ಘಾನ್ ಪ್ರಜೆಗಳಲ್ಲಿ ಭೀತಿ ಆವರಿಸಿದೆ. ಸಾವಿರಾರು ಜನರು ದೇಶ ತೊರೆಯುವ ಉದ್ದೇಶದಿಂದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆ. ಟೇಕಾಫ್ ಆಗುತ್ತಿದ್ದ ಅಮೆರಿಕ ಮಿಲಿಟರಿ ವಿಮಾನವನ್ನೇ ಹತ್ತಲು ಹೋಗಿ ಅನೇಕರು ಸಾವನ್ನಪ್ಪಿದ್ದಾರೆ. ಅಫ್ಘಾನ್ ಪ್ರಜೆಗಳ ಸಾವು-ನೋವಿನ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ