OMG: 123 ಕೋಟಿ ರೂ.ಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್!
ಶ್ರೀಮಂತ ವ್ಯಕ್ತಿಗಳು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸಲು ಕಾರಿಗೆ ಬಳಸುವ ಫ್ಯಾನ್ಸಿ ನಂಬರ್‍ಗಳನ್ನು ಯುಎಇಯಲ್ಲಿ ಹರಾಜು ಹಾಕಲಾಗುತ್ತದೆ. 2008ರಲ್ಲಿ ಅಬುಧಾಬಿಯಲ್ಲಿ ‘ನಂಬರ್ 1’ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ 117 ಕೋಟಿ ರೂ.ಗೆ ಹರಾಜಾಗಿತ್ತು.
ಅಬುಧಾಬಿ: ದುಬೈನಲ್ಲಿ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ 123 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಈ ಅಪರೂಪದ ಕಾರಿನ ನಂಬರ್ ಪ್ಲೇಟ್‍ಅನ್ನು ಶ್ರೀಮಂತ ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮೊತ್ತ ಪಾವತಿಸಿ ಖರೀದಿಸಿದ್ದು ವಿಶ್ವದಾಖಲೆಯಾಗಿದೆ.
P7 ಹೆಸರಿನ ನಂಬರ್ ಪ್ಲೇಟ್ ಶನಿವಾರವಷ್ಟೇ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 123 ಕೋಟಿ ರೂ.ಗೆ ಮಾರಾಟವಾಗಿದೆ. ಈ ನಂಬರ್ ಪ್ಲೇಟ್‍ನಲ್ಲಿ P ಸಂಖ್ಯೆ ಬದಿಯಲ್ಲಿರುವುದರಿಂದ 7 ನಂಬರ್ ಮಾತ್ರ ಎದ್ದುಕಾಣುವಂತಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ, ಕ್ಯಾತೆ ತೆಗೆದ ಚೀನಾ
ಈ ಹರಾಜು ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಹಣವನ್ನು ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರ ಜಾಗತಿಕ ಆಹಾರ ನೆರವು ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರೀಮಂತ ವ್ಯಕ್ತಿಗಳು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಪ್ರದರ್ಶಿಸಲು ಕಾರಿಗೆ ಬಳಸುವ ಫ್ಯಾನ್ಸಿ ನಂಬರ್‍ಗಳನ್ನು ಯುಎಇಯಲ್ಲಿ ಹರಾಜು ಹಾಕಲಾಗುತ್ತದೆ. 2008ರಲ್ಲಿ ಅಬುಧಾಬಿಯಲ್ಲಿ ‘ನಂಬರ್ 1’ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ 117 ಕೋಟಿ ರೂ.ಗೆ ಹರಾಜಾಗಿತ್ತು.
ಇದನ್ನೂ ಓದಿ: ಭಾರತವನ್ನು ವಿಶ್ವದ ಗುರು ಎಂದ ಉಕ್ರೇನ್ ಉಪ ವಿದೇಶಾಂಗ ಸಚಿವೆ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.