ಪ್ರವಾಹದ ಕುರಿತು ಲೈವ್ ವರದಿ ಮಾಡಲು ನೀರಿನ ಆಳಕ್ಕೆ ಇಳಿದ ಪಾಕ್ ಪತ್ರಕರ್ತ..!
ಘಟನೆ ನಡೆದ ಸ್ಥಳದಿಂದ ಲೈವ್ ವರದಿ ಮಾಡುವುದು ಕೆಲವೊಮ್ಮೆ ರೋಮಾಂಚನಕಾರಿ ಎಂದು ತೋರುತ್ತದೆ ಆದರೆ ಅದು ಅಷ್ಟೇ ಕಷ್ಟಕರ ಕೂಡ ಹೌದು.
ನವದೆಹಲಿ: ಘಟನೆ ನಡೆದ ಸ್ಥಳದಿಂದ ಲೈವ್ ವರದಿ ಮಾಡುವುದು ಕೆಲವೊಮ್ಮೆ ರೋಮಾಂಚನಕಾರಿ ಎಂದು ತೋರುತ್ತದೆ ಆದರೆ ಅದು ಅಷ್ಟೇ ಕಷ್ಟಕರ ಕೂಡ ಹೌದು.
ಈಗ ಪಾಕಿಸ್ತಾನದ ವರದಿಗಾರನೊಬ್ಬಪಂಜಾಬ್ ಪ್ರದೇಶದಲ್ಲಿ ಸಿಂಧ್ ನದಿಯಿಂದ ಉಂಟಾದ ಪ್ರವಾಹದ ಬಗ್ಗೆ ವರದಿ ಮಾಡಲು ನೀರಿನ ಆಳಕ್ಕೆ ನುಗ್ಗಿ ವರದಿ ಮಾಡಲು ಮುಂದಾಗಿದ್ದಾನೆ. ನೀರಿನ ಮಟ್ಟ ಅವನ ಕುತ್ತಿಗೆವರೆಗೂ ಬಂದಿರುವುದು ವೀಡಿಯೋದಲ್ಲಿ ಸೇರೆಯಾಗಿದೆ.ಈಗ ನ್ಯೂಸ್ ಚಾನೆಲ್ ಸ್ವತಃ ಹಂಚಿಕೊಂಡಿರುವ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಈ ಪತ್ರಕರ್ತನನ್ನು ಪಾಕ್ ಜಿ-ಟಿವಿ ನ್ಯೂಸ್ ನ ಅಜರ್ ಹುಸೇನ್ ಎಂದು ಗುರುತಿಸಲಾಗಿದೆ. 'ಪ್ರವಾಹದ ನೀರಿನಲ್ಲಿರುವ ಪಾಕಿಸ್ತಾನಿ ವರದಿಗಾರ, ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅಪಾಯದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ ಎಂದು ಚಾನಲ್ ಈ ವರದಿಗಾರನ ಬಗ್ಗೆ ಬರೆದುಕೊಂಡಿದೆ.
ವರದಿ ಮಾಡಲು ನೀರಿನ ಆಳದಲ್ಲಿ ನಿಂತಿರುವ ಅಜರ್ ಹುಸೇನ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿರುವ ಕುರಿತಾಗಿ ವರದಿ ಮಾಡಿದ್ದಾನೆ ಎನ್ನಲಾಗಿದೆ.