ಇಸ್ಲಾಮಾಬಾದ್ :ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿಗೆ ಸರಿಯಾದ ಒಳ ಉಡುಪು ಧರಿಸಲು ಸೂಚಿಸಿದೆ ಎಂದು ಪಾಕಿಸ್ತಾನದ ಮಾಧ್ಯಮವು ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಕ್ಯಾಬಿನ್ ಸಿಬ್ಬಂದಿಯ ಕಳಪೆ ಡ್ರೆಸಿಂಗ್ ನಕಾರಾತ್ಮಕ ಚಿತ್ರಣವನ್ನು ಬಿಂಬಿಸುತ್ತದೆ ಎಂದು ಪಾಕ್ ವಿಮಾನಯಾನ ಸಂಸ್ಥೆ ಹೇಳಿರುವುದನ್ನು ಜಿಯೋ ಟಿವಿ ವರದಿ ಮಾಡಿದೆ. ಅಷ್ಟೇ ಅಲ್ಲದೆ ಈ ಆದೇಶವನ್ನು ವಿಚಿತ್ರ ಎಂದು ಕರೆದಿದೆ.


"ಕೆಲವು ಕ್ಯಾಬಿನ್ ಸಿಬ್ಬಂದಿ ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಸ್ಥಳಗಳಿಗೆ ಭೇಟಿ ನೀಡುವಾಗ ಸಾಂದರ್ಭಿಕವಾಗಿ ಧರಿಸುತ್ತಾರೆ. ಅಂತಹ ಡ್ರೆಸ್ಸಿಂಗ್ ಕೆಟ್ಟ ಅಭಿಪ್ರಾಯವನ್ನು ಹುಟ್ಟು ಹಾಕುತ್ತದೆ, ಇದು ಕೇವಲ ನೋಡುಗರರ ಮೇಲೆ ಮತ್ತು ವ್ಯಕ್ತಿಯ ಮಾತ್ರವಲ್ಲದೆ ಸಂಸ್ಥೆಯ ನಕಾರಾತ್ಮಕ ಚಿತ್ರಣವನ್ನು ಚಿತ್ರಿಸುತ್ತದೆ." ಎಂದು ಸಿಬ್ಬಂದಿಗೆ ಕಳುಸಿರುವ ಮೆಮೊದಲ್ಲಿ ಉಲ್ಲೆಖಿಸಲಾಗಿದೆ.


ಇದನ್ನೂ ಓದಿ: ಸಂತ್ರಸ್ಥ ಕುಟುಂಬಕ್ಕೆ ಸರ್ಕಾರಿ ನೌಕರಿ ಭರವಸೆ ಕೊಟ್ಟ ರಾಹುಲ್ ಗಾಂಧಿ


ಪಾಕಿಸ್ತಾನದ ವಾಯುಯಾನ ಮತ್ತು ರೈಲ್ವೆ ಸಚಿವ ಖವಾಜಾ ಸಾದ್ ರಫೀಕ್ ಅವರು ವಿಮಾನಯಾನದ ಸೇವೆಯನ್ನು ಸುಧಾರಿಸಲು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಪ್ರಯಾಣಿಕರಿಗೆ ವಿಮಾನದಲ್ಲಿ ಮನರಂಜನಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವಂತೆ ಸಚಿವರು ಸೂಚನೆ ನೀಡಿದರು ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.