ವಾಯುಸೇನೆ ದಾಳಿಯ ನಂತರ ಪತ್ರಕರ್ತರ ಜೊತೆ ಬಾಲಾಕೋಟಗೆ ತೆರಳಿದ ಪಾಕ್ ಆರ್ಮಿ
ಬಾಲಾಕೋಟ್ ನಲ್ಲಿ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಒಂದು ತಿಂಗಳ ನಂತರ ಪಾಕಿಸ್ತಾನ ಸೇನೆ ಆ ಪ್ರದೇಶಕ್ಕೆ ಪತ್ರಕರ್ತರ ತಂಡದ ಜೊತೆಗೆ ತೆರಳಿದೆ ಎಂದು ತಿಳಿದುಬಂದಿದೆ.
ನವದೆಹಲಿ: ಬಾಲಾಕೋಟ್ ನಲ್ಲಿ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಒಂದು ತಿಂಗಳ ನಂತರ ಪಾಕಿಸ್ತಾನ ಸೇನೆ ಆ ಪ್ರದೇಶಕ್ಕೆ ಪತ್ರಕರ್ತರ ತಂಡದ ಜೊತೆಗೆ ತೆರಳಿದೆ ಎಂದು ತಿಳಿದುಬಂದಿದೆ.
ಗುಪ್ತಚರ ಮೂಲಗಳು ಹೇಳುವಂತೆ ಈ ಪ್ರದೇಶದಲ್ಲಿನ ಜೆಎಂ ಮದ್ರಾಸದಲ್ಲಿ ಸುಮಾರು 300 ಕ್ಕಿಂತಲೂ ಹೆಚ್ಚು ಮಕ್ಕಳು ಇದ್ದಾರೆ ಎನ್ನಲಾಗಿದೆ.ಪಾಕ್ ಸೈನ್ಯದೊಂದಿಗೆ ಬಂತಹ ಪತ್ರಕರ್ತರು ಅಲ್ಲಿರುವ ಮಕ್ಕಳನ್ನು ಭೇಟಿ ಮಾಡಿ ವೀಡಿಯೋ ರಿಕಾರ್ಡಿಂಗ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈಗ ಈ ಪ್ರದೇಶವನ್ನು ಫ್ರಾಂಟಿಯರ್ ಪಾಕ್ ಸೇನೆಯಿಂದ ರಕ್ಷಿಸಲಾಗಿದೆ.
ಭಾರತವು ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟದ ಮೇಲೆ ವಾಯುದಾಳಿಯನ್ನು ನಡೆಸಿತ್ತು,ಇದೇ ಸಂದರ್ಭದಲ್ಲಿ ಭಾರತದ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಪಾಕ್ ಸೈನ್ಯಕ್ಕೆ ಸೆರೆಸಿಕ್ಕಿಬಿದ್ದಿದ್ದರು.ಆದರೆ ನಂತರಕ್ ಪ್ರಧಾನಿ ಇಮ್ರಾನ್ ಖಾನ್ ಶಾಂತಿಯ ಪ್ರತೀಕವಾಗಿ ಅವರನ್ನು ಬಿಡುಗಡೆಗೊಳಿಸಿದ್ದರು.