ನವದೆಹಲಿ: ಪತ್ರಕರ್ತ ಚಂದ್ ನವಾಬ್ ಬಳಿಕ ಈಗ ಮತ್ತೋರ್ವ ವರದಿಗಾರ ಅಮೀನ್ ಹಫೀಜ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿದ್ದೆ. ಇತ್ತೀಚಿನ ಪ್ರಕರಣವೊಂದರಲ್ಲಿ ಕತ್ತೆ ಮೇಲೆ ಕುಳಿತು ವರದಿ ಮಾಡುತ್ತಿದ್ದ ಪತ್ರಕರ್ತ ಕೆಳಗೆ ಬಿದ್ದ ಘಟನೆ ಲಾಹೋರ್ ನಲ್ಲಿ ನಡೆದಿದೆ. ಪ್ರಸಿದ್ಧ ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಪಾಕಿಸ್ತಾನದ ಜಿಯೋ ನ್ಯೂಸ್ ಚಾನಲ್ ಕತ್ತೆಗಳ ಮೇಲೆ ವಿಶೇಷ ವರದಿಯನ್ನು ಸಿದ್ಧಪಡಿಸಿದೆ. ಪಾಕಿಸ್ತಾನದಲ್ಲಿ ಕತ್ತೆ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಪಂಜಾಬ್ ಜಾನುವಾರು ಇಲಾಖೆಯ ಅಂಕಿಅಂಶಗಳ ಪ್ರಕಾರ, ಲಾಹೋರ್ ನಲ್ಲಿರುವ ಕತ್ತೆ ಸಂಖ್ಯೆ 41 ಸಾವಿರಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಇದಲ್ಲದೆ, ಪಾಕಿಸ್ತಾನವು ಕತ್ತೆಗಳ ಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ದೇಶವಾಗಿದೆ. 


ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ನಗರದಲ್ಲಿ 'ಡಾಂಕಿ ಆಸ್ಪತ್ರೆ'ಯನ್ನು ತೆರೆದಿದೆ. ಈ ಆಸ್ಪತ್ರೆಯಲ್ಲಿ ಕತ್ತೆಗಳಿಗೆ ರೋಗ ನಿವಾರಿಸಲು ಚಿಕಿತ್ಸೆ ನೀಡುವುದರ ಜೊತೆಗೆ ಕತ್ತೆಗಳನ್ನು ಆರೋಗ್ಯಕರವಾಗಿಡಲು ಔಷಧಿಗಳನ್ನು ಕೂಡಾ ನೀಡುತ್ತದೆ.


ಮಾಲೀಕರಿಗೆ ಲಾಭ:
ವಿಶೇಷ ವಿಷಯವೆಂದರೆ, ಈ ಪ್ರಾಣಿಯನ್ನು ಕೊಳ್ಳುವುದು ದುಬಾರಿ. 35 ರಿಂದ 55 ಸಾವಿರ ರೂಪಾಯಿ ಮೌಲ್ಯದ್ದಾಗಿದೆ. ಕತ್ತೆ 4 ನೇ ವಯಸ್ಸಿನಿಂದ ತನ್ನ ಮಾಲೀಕನಿಗೆ ಲಾಭ ತಂದುಕೊಡಲು ಪ್ರಾರಂಭಿಸುತ್ತದೆ. ಕತ್ತೆಯಿಂದ ಮಾಲೀಕನು ದಿನಕ್ಕೆ 1000 ರೂ. ಗಳಿಸುತ್ತಾರೆ. ಮಾಲೀಕನು 12 ವರ್ಷಗಳ ಕಾಲ ಕತ್ತೆಯಿಂದ ದುಡಿಸಿಕೊಳ್ಳಬಹುದು.


5.3 ದಶಲಕ್ಷ ಕತ್ತೆ:
ಮಾಧ್ಯಮ ವರದಿಗಳ ಪ್ರಕಾರ ಪಾಕಿಸ್ತಾನವು 100,000 ದಿಂದ 5.3 ದಶಲಕ್ಷ ಕತ್ತೆಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಕತ್ತೆಗಳ ಅಂಕಿ-ಅಂಶಗಳ ಪ್ರಕಾರ, ಚೀನಾ ವಿಶ್ವದಲ್ಲೇ ಒಂದಾಗಿದೆ. ಪಾಕಿಸ್ತಾನ ಮತ್ತು ಇಥಿಯೋಪಿಯ ಎರಡನೆಯ ಮತ್ತು ಮೂರನೇ ಸ್ಥಾನದಲ್ಲಿದೆ.