ನವದೆಹಲಿ: ಪಾಕಿಸ್ತಾನ-ಚೀನಾ ನಡುವಿನ ಬಸ್ ಸಂಚಾರಕ್ಕೆ ಭಾರತದ ತೀವ್ರ ವಿರೋಧದ ನಡುವೆಯೂ ಮಂಗಳವಾರದಂದು ಲಾಹೋರ್ ನಿಂದ ಚಾಲನೆ ನೀಡಲಾಗಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ಪ್ರಕಾರ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನಲ್ಲಿರುವ ಐಷಾರಾಮಿ ಬಸ್ ಸೇವೆಯನ್ನು ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಶುಜಾ ಎಕ್ಸ್ಪ್ರೆಸ್ ನಿರ್ವಹಿಸುತ್ತಿದೆ.ಈಗ ಈ ಕ್ರಮಕ್ಕೆ ಭಾರತ  ಈ ಬಸ್ ಸಂಚಾರ ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ "ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘಿಸಿದಂತಾಗಿದೆ" ಎಂದು ಕಳೆದ ವಾರ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದ್ದರು.


1963 ರ ಚೀನಾ-ಪಾಕಿಸ್ತಾನದ ಬೌಂಡರಿ ಒಪ್ಪಂದ ಎಂದು ಕರೆಯುವ ಈ ಕಾನೂನು ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ, ಮತ್ತು ಇದನ್ನು ಭಾರತ ಸರ್ಕಾರ ಎಂದಿಗೂ ಗುರುತಿಸಲ್ಪಟ್ಟಿಲ್ಲ ಎಂದು ತಿಳಿಸಿದೆ. ಹೀಗಾಗಿ,ಅಂತಹ ಯಾವುದೇ ಬಸ್ ಸೇವೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.