ಸ್ಟಾಕ್‌ಹೋಮ್‌: ಪಾಕಿಸ್ತಾನ ಮತ್ತು ಚೀನಾದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ ಕ್ರಮೇಣ ಹೆಚ್ಚಾಗಿದೆ. ಆದರೆ 2019ರ ಆರಂಭದಲ್ಲಿ ಭಾರತ ಮಾತ್ರ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ಯಥಾವತ್‌ ಉಳಿಸಿಕೊಂಡಿದೆ. ಪಾಕಿಸ್ತಾನ ತನ್ನ ಶಸ್ತ್ರಾಗಾರದಲ್ಲಿ ಸರಿಸುಮಾರು 150-160 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಚೀನಾವು 290 ರಷ್ಟನ್ನು ಹೊಂದಿದ್ದು, ಭಾರತವು ಕೇವಲ 130-140 ಬಾಂಬ್‌ಗಳನ್ನು ಹೊಂದಿದೆ ಎಂದು ದಿ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ಸೋಮವಾರ ಬಿಡುಗಡೆ ಮಾಡಿದ 2019ರ ಇಯರ್‌ ಬುಕ್‌ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

2019 ರ ಆರಂಭದಲ್ಲಿ ಚೀನಾ 280 ಪರಮಾಣು ಬಾಂಬ್‌ಗಳನ್ನು ಹೊಂದಿತ್ತು ಆದರೆ ಈಗ ಅದನ್ನು 290 ಕ್ಕೆ ಹೆಚ್ಚಿಸಿದೆ. ಅದೇ ರೀತಿ ಪಾಕಿಸ್ತಾನದ ದಾಸ್ತಾನು 140-150 ರಿಂದ 150-160, ಇಸ್ರೇಲ್ 80 ರಿಂದ 80-90 ಮತ್ತು ಉತ್ತರ ಕೊರಿಯಾ ತನ್ನ ಶಸ್ತ್ರಾಗಾರವನ್ನು 10 ರಿಂದ ದ್ವಿಗುಣಗೊಳಿಸಿ  20-30ಕ್ಕೆ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದೆ.


ಮತ್ತೊಂದೆಡೆ, ಭಾರತವು 130-140 ಪರಮಾಣು ಬಾಂಬುಗಳನ್ನು ಹೊಂದಿದೆ, ಅದು 2018 ರ ಆರಂಭದಲ್ಲಿ ಇಷ್ಟೇ ಪ್ರಮಾಣದ ಅಣ್ವಸ್ತ್ರವನ್ನು ಹೊಂದಿದ್ದು, ಅದೇ ಸಂಖ್ಯೆಯನ್ನು ಕಾಯ್ದುಕೊಂಡಿದೆ.


"ಚೀನಾ, ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳ ಗಾತ್ರವನ್ನು ಹೆಚ್ಚಿಸುತ್ತಿವೆ." ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಮಿಲಿಟರಿಗೆ ಅಗತ್ಯವಾದ ವಸ್ತು ಉತ್ಪಾದನಾ ಸಾಮರ್ಥ್ಯವನ್ನು ಒಂದು ಪ್ರಮಾಣದಲ್ಲಿ ವಿಸ್ತರಿಸುತ್ತಿವೆ, ಇದು ಮುಂದಿನ ದಶಕದಲ್ಲಿ ತಮ್ಮ ಪರಮಾಣು ಶಸ್ತ್ರಾಸ್ತ್ರ ದಾಸ್ತಾನುಗಳ ಗಾತ್ರದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಬಹುದು" ಎಂದು ಎಸ್‌ಐಪಿಆರ್‌ಐನ ಪರಮಾಣು ನಿಶ್ಯಸ್ತ್ರೀಕರಣ, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಪ್ರಸರಣ ರಹಿತ ಕಾರ್ಯಕ್ರಮದ ನಿರ್ದೇಶಕ ಶಾನನ್ ಕಿಲೆ ಹೇಳುತ್ತಾರೆ.


ಆದರೆ 2019 ರ ಆರಂಭದಲ್ಲಿ ಅಣ್ವಸ್ತ್ರಗಳ ಸಂಖ್ಯೆ 2018 ರಿಂದ ಕಡಿಮೆಯಾಗಿದೆ ಎಂದು SIPRI  2019ರ ಇಯರ್‌ಬುಕ್ ಹೇಳುತ್ತದೆ. ಒಂಬತ್ತು ದೇಶಗಳು - ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಉತ್ತರ ಕೊರಿಯಾ) - ಸರಿಸುಮಾರು 13,865 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ, ಇದು 2018 ರ ಆರಂಭದಲ್ಲಿ ಬಾಂಬುಗಳ ಸಂಖ್ಯೆಯಿಂದ (14,465) 600 ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.