ಜಮ್ಮು- ಕಾಶ್ಮೀರ: ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಪಾಕ್ ಪ್ರತಿಕ್ರಿಯೆ ಏನು?
ಈ ಅಂತರರಾಷ್ಟ್ರೀಯ ವಿವಾದದಲ್ಲಿ ಪಾಕಿಸ್ತಾನವೂ ಸಹ ಒಂದು ಪಕ್ಷವಾಗಿರುವುದರಿಂದ ಈ ಕಾನೂನುಬಾಹಿರ ನಿರ್ಧಾರಗಳ ವಿರುದ್ಧ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕುರಿತು ಕೇಂದ್ರ ಸರ್ಕಾರ ಸೋಮವಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಪಾಕಿಸ್ತಾನದ ಮೊದಲ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ಕಲಂ 370ರ ಬಗ್ಗೆ ಪ್ರತಿಕ್ರಿಯೆ ನೀಡಿದೆ. "ಈ ಅಂತರರಾಷ್ಟ್ರೀಯ ವಿವಾದದಲ್ಲಿ ಪಾಕಿಸ್ತಾನವೂ ಸಹ ಒಂದು ಪಕ್ಷವಾಗಿರುವುದರಿಂದ ಈ ಕಾನೂನುಬಾಹಿರ ನಿರ್ಧಾರಗಳ ವಿರುದ್ಧ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪಾಕಿಸ್ತಾನವು ಕಾಶ್ಮೀರಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ" ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.