ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನವನ್ನು ತನ್ನ ವಾಯುಪ್ರದೇಶದ ಬಳಕೆಯನ್ನು ನಿರಾಕರಿಸುವ ಪಾಕಿಸ್ತಾನದ ಕ್ರಮದ ನಂತರ, ಭಾರತವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ (ಐಸಿಎಒ) ದೂರು ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

'ಓವರ್‌ಫ್ಲೈಟ್ ಅನುಮತಿಯನ್ನು ಕೋರಲಾಗಿದೆ, ಮತ್ತು ನಿಗದಿತ ಐಸಿಎಒ ಮಾರ್ಗಸೂಚಿಗಳ ಪ್ರಕಾರ ಇತರ ದೇಶಗಳಿಂದ ನೀಡಲಾಗುತ್ತದೆ ಮತ್ತು ಭಾರತವು ಅಂತಹ ಓವರ್‌ಫ್ಲೈಟ್ ಅನುಮತಿಗಳನ್ನು ಪಡೆಯುವುದನ್ನು ಮುಂದುವರಿಸುತ್ತದೆ. ಈಗ ನಿರಾಕರಣೆಯ ವಿಷಯವನ್ನು ಪ್ರತ್ಯೇಕವಾಗಿ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯೊಂದಿಗೆ ಕೈಗೆತ್ತಿಕೊಂಡಿದ್ದೇವೆ' ಎಂದು ಮೂಲಗಳು ತಿಳಿಸಿವೆ.


ಪ್ರಧಾನಿ ಮೋದಿಯವರು ಸೌದಿ ಅರೇಬಿಯಾಕ್ಕೆ ಹೊರಡುವ ನಿಟ್ಟಿನಲ್ಲಿ ಪಾಕ್ ವಾಯುಪ್ರದೇಶದ ಅನುಮತಿಗಾಗಿ ಮನವಿಯನ್ನು ಮಾಡಿತ್ತು, ಆದರೆ ಈ ಮನವಿಯನ್ನು ಪಾಕ್ ಸಾರಾಸಗಟಾಗಿ ತಿರಸ್ಕರಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಯುಪ್ರದೇಶವನ್ನು ಬಳಸಬೇಕೆಂಬ ನವದೆಹಲಿಯ ಮನವಿಯನ್ನು ಇಸ್ಲಾಮಾಬಾದ್ ನಿರಾಕರಿಸಿದೆ ಎಂದು ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಭಾನುವಾರ ಪ್ರಕಟಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.


ಮಾಧ್ಯಮ ವರದಿಗಳ ಪ್ರಕಾರ ಮಂಗಳವಾರ ಅಂತಾರಾಷ್ಟ್ರೀಯ ವ್ಯಾಪಾರ ಸಮ್ಮೇಳನದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರಿಗೆ ವಾಯುಪ್ರದೇಶವನ್ನು ಬಳಸಲು ಭಾರತ ಪಾಕಿಸ್ತಾನದ ಅನುಮತಿ ಕೋರಿತ್ತು. ಇಸ್ಲಾಮಾಬಾದ್ ನಿರ್ಧಾರವನ್ನು ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರಿಗೆ ಲಿಖಿತವಾಗಿ ತಿಳಿಸಲಾಗುವುದು ಎಂದು ಪಾಕ್ ತಿಳಿಸಿದೆ.ಸೆಪ್ಟೆಂಬರ್ 20 ರಂದು ನಡೆಯಲಿರುವ ಯುಎನ್ ಜನರಲ್ ಅಸೆಂಬ್ಲಿ ಅಧಿವೇಶನಕ್ಕಾಗಿ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ಪಾಕಿಸ್ತಾನ ಈ ಹಿಂದೆ ವಾಯುಪ್ರದೇಶದ ಅನುಮತಿಯನ್ನು ನಿರಾಕರಿಸಿತ್ತು.