ಪಾಕಿಸ್ತಾನದಲ್ಲಿ ಹಿಟ್ಟಿನ ಬಿಕ್ಕಟ್ಟು : ಗೋದಿ ಹಿಟ್ಟಿಗಾಗಿ ಪಾಕ್ ಪ್ರಜೆಗಳ ಹೊಡೆದಾಟ, ಸಾವು..!
Pakistan flour crisis : ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಇತರೆ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಕರಾಚಿಯಲ್ಲಿ ಪ್ರತಿ ಕಿಲೋಗ್ರಾಂಗೆ ಹಿಟ್ಟಿನ ಬೆಲೆ 140 ರೂ.ನಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟು 1,500 ರೂ. ರಂತೆ, 20 ಕೆಜಿ ಹಿಟ್ಟನ್ನು 2,800 ರೂ.ಗೆ ಮಾರಾಟಮಾಡಲಾಗುತ್ತಿದೆ. ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕಿಲೋಗ್ರಾಂಗೆ 160 ರೂ.ಗೆ ಹೆಚ್ಚಿಸಿದ್ದಾರೆ.
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಗೋಧಿ ಮತ್ತು ಇತರ ಹಿಟ್ಟಿನ ಬೆಲೆಗಳು ಗಗನಕ್ಕೇರುತ್ತಿದ್ದು, ಪಾಕಿಸ್ತಾನವು ತನ್ನ ಅತ್ಯಂತ ಕೆಟ್ಟ ಹಿಟ್ಟಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಖೈಬರ್ ಪಖ್ತುನ್ಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಹಲವಾರು ಪ್ರದೇಶಗಳಲ್ಲಿ ಹಿಟ್ಟಿಗಾಗಿ ಜನರು ಮುಗಿಬಿದ್ದ ಪರಿಣಾಮ ಕಾಲ್ತುಳಿತಗಳ ವರದಿಯಾಗಿವೆ. ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಈಗಾಗಲೇ ಹಿಟ್ಟಿನ ಪೂರೈಕೆಯಲ್ಲಿ ಕೊರತೆಯಿರುವ ಕಾರಣ ಹಿಟ್ಟಿನ ಸಬ್ಸಿಡಿ ಚೀಲಗಳನ್ನು ಪಡೆಯಲು ಜನರು ಪ್ರತಿದಿನ ಗಂಟೆಗಳ ಕಾಲ ಕಳೆಯುವಂತಾಗಿದೆ.
ಸಶಸ್ತ್ರ ಗಾರ್ಡ್‌ಗಳ ಬೆಂಗಾವಲು ಹೊಂದಿರುವ ಮಿನಿ ಟ್ರಕ್‌ಗಳು ಮತ್ತು ವ್ಯಾನ್‌ಗಳು ಹಿಟ್ಟನ್ನು ವಿತರಿಸಲು ಪ್ರಾರಂಭಿಸುತ್ತಿದ್ದಂತೆ ಜನರು ಸರಬರಾಜು ಟ್ರಕ್‌ಗಳ ಹಿಂದೆ ಓಡುತ್ತಿದ್ದಾರೆ. ಹಿಟ್ಟಿನ ಚೀಲಗಳಿಗಾಗಿ ಪರಸ್ಪರ ಕಿತ್ತಾಟ ಶುರುಮಾಡಿದ್ದಾರೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಕರಾಚಿಯಲ್ಲಿ ಹಿಟ್ಟು ಪ್ರತಿ ಕಿಲೋಗ್ರಾಂಗೆ 140 ರೂ.ನಿಂದ 160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟು ಪ್ರತಿ ಕಿಲೋಗ್ರಾಂಗೆ 1,500 ರೂ.ಗೆ ಮಾರಾಟವಾಗುತ್ತಿದ್ದು, 20 ಕೆಜಿ ಹಿಟ್ಟು 2,800 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕಿಲೋಗ್ರಾಂಗೆ 160 ರೂ.ಗೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಸಂಕ್ರಾಂತಿಗೆ ಒಂದು ಸಾವಿರ ರೂಪಾಯಿ ಮತ್ತು ಗಿಫ್ಟ್ ಹ್ಯಾಂಪರ್ !
Narendra Modi: ತಮ್ಮ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸುತ್ತಿರುವ ಪ್ರಧಾನಿ ಮೋದಿ
ಜನರಿಗೆ ಸರ್ಕಾರದ ಸಬ್ಸಿಡಿ ಹಿಟ್ಟನ್ನು ಮಾರಾಟ ಮಾಡುವಾಗ ಮಿರ್ಪುರ್ಖಾಸ್ ಪ್ರಾಂತ್ಯದಲ್ಲಿ ಕಾಲ್ತುಳಿತ ಉಂಟಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ತಲಾ 200 ಚೀಲಗಳನ್ನು ಹೊತ್ತ ಎರಡು ವಾಹನಗಳು ಗುಲಿಸ್ತಾನ್-ಎ-ಬಲ್ದಿಯಾ ಪಾರ್ಕ್‌ನ ಹೊರಗೆ ಹಿಟ್ಟು ಮಾರಾಟ ಮಾಡುತ್ತಿದ್ದಾಗ ಕಮಿಷನರ್ ಕಚೇರಿ ಬಳಿ ಈ ಘಟನೆ ಸಂಭವಿಸಿದೆ. ಮಿನಿ ಟ್ರಕ್‌ಗಳು ತಲಾ 10 ಕೆಜಿ ಹಿಟ್ಟಿನ ಚೀಲಗಳನ್ನು ಕೆಜಿಗೆ 65 ರೂ.ನಂತೆ ಮಾರಾಟ ಮಾಡುತ್ತಿದ್ದರಿಂದ ವಾಹನಗಳ ಸುತ್ತಲೂ ಜನ ಜಮಾಯಿಸಿದ್ದು, ಪರಸ್ಪರ ತಳ್ಳಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.