ನವದೆಹಲಿ: ಬಾಲಕೋಟ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಪ್ರತಿದಿನ 600 ವಿಮಾನಗಳು ಹಾರಾಟದ ಮೇಲೆ ಪರಿಣಾಮ ಬೀರಿತ್ತು ಎಂದು ಭಾರತ ತಿಳಿಸಿದೆ. 


COMMERCIAL BREAK
SCROLL TO CONTINUE READING

ಫೆಬ್ರವರಿ 27 ರಿಂದ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು 140 ದಿನಗಳ ಕಾಲ ಮುಚ್ಚಿತ್ತು ಎನ್ನಲಾಗಿದೆ.ಇತ್ತೀಚಿಗಷ್ಟೇ ಜುಲೈ 16 ರಂದು ಮಾತ್ರ ತನ್ನ ವಾಯುಪ್ರದೇಶವನ್ನು ತೆರವುಗೊಳಿಸಿತ್ತು. ಈ ಹಿನ್ನಲೆಯಲ್ಲಿ ಒಂದು ಲೆಕ್ಕಾಚಾರದ ಪ್ರಕಾರ ಸುಮಾರು 84,000 ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.


ಈ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, “2019 ರ ಫೆಬ್ರವರಿ 27 ರಂದು ಪಾಕಿಸ್ತಾನದ ವಾಯುಪ್ರದೇಶವನ್ನು ಮುಚ್ಚಿದ್ದರಿಂದಾಗಿ ಭಾರತ-ಪಾಕಿಸ್ತಾನ ವಾಯುಪ್ರದೇಶದ ಗಡಿಯುದ್ದಕ್ಕೂ ದಿನಕ್ಕೆ ಕಾರ್ಯನಿರ್ವಹಿಸುವ 600 ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ನಂತರ ಈ ವಿಮಾನಗಳನ್ನು ಅರೇಬಿಯನ್ ಸಮುದ್ರ ವಾಯುಪ್ರದೇಶದ ಮೂಲಕ ಹಾರಾಡುವ ವ್ಯವಸ್ಥೆ ಮಾಡಲಾಯಿತು' ಎಂದು ತಿಳಿಸಿದರು.


ಫೆಬ್ರವರಿ 14 ರ ಪುಲ್ವಾಮಾ ದಾಳಿಗೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು ಕಾರಣವಾಗಿದ್ದು, ಈ ದಾಳಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತದ ವಾಯುಸೇನಾ ಪಡೆಗಳು ಫೆಬ್ರವರಿ 26 ರಂದು ಬಾಲಕೋಟ್ನಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಶಿಬಿರಗಳ ದಾಳಿ ನಡೆಸಿದ ನಂತರ ಫೆಬ್ರವರಿಯಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. 


ಭಾರತೀಯ ದಾಳಿಯ ನಂತರ ಫೆಬ್ರವರಿ 27 ರಂದು ಪಾಕಿಸ್ತಾನವು ಭಾರತೀಯ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ನಡೆಸಿತ್ತು, ಮತ್ತು ಕೆಲವು ದಿನಗಳ ಕಾಲ ನವದೆಹಲಿ ಪಾಕಿಸ್ತಾನದ ಗಡಿಯ ಸುತ್ತ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಆದರೆ ಪಾಕಿಸ್ತಾನ ಮಾತ್ರ ಇತ್ತೀಚಿಗಿನ ದಿನದವರೆಗೂ ವಾಯು ಪ್ರದೇಶವನ್ನು ಹಾಗೆ ಮುಚ್ಚಿತ್ತು. ಇದರಿಂದಾಗಿ ಜಾಗತಿಕ ವಾಯು ಸಂಚಾರದ ಮೇಲೆ ಹೆಚ್ಚು ಪರಿಣಾಮ ಬಿರಿದೆ ಎಂದು ಸಚಿವರು ತಿಳಿಸಿದರು.