ನವದೆಹಲಿ: ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೈಗೊಂಡ ನಂತರ ಈಗ ಭಾರತದೊಂದಿಗಿನ ರಾಜತಾಂತ್ರಿಕ ಹಾಗೂ ದ್ವೀಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಧಿಕೃತವಾಗಿ ಘೋಷಿಸಿದೆ.



COMMERCIAL BREAK
SCROLL TO CONTINUE READING

ಅಲ್ಲದೆ ಕಾಶ್ಮೀರದ ವಿಚಾರವಾಗಿ ಭಾರತ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸಂಪರ್ಕಿಸುವುದಾಗಿ ಇಸ್ಲಾಮಾಬಾದ್ ಹೇಳಿದೆ. ಎಎಫ್‌ಪಿ ವರದಿ ಪ್ರಕಾರ ಈಗ ಪಾಕಿಸ್ತಾನ ಭಾರತೀಯ ರಾಯಭಾರಿಯನ್ನು ದೇಶಕ್ಕೆ ಹೊರಹಾಕಿದೆ ಎನ್ನಲಾಗಿದೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ಸರ್ಕಾರದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳಿಂದ ಉಂಟಾಗುವ ಪರಿಸ್ಥಿತಿ, ಭಾರತೀಯ ಆಕ್ರಮಿತ ಜೆ & ಕೆ ಒಳಗೆ ಮತ್ತು ಎಲ್‌ಒಸಿ ಉದ್ದಕ್ಕೂ ಉಂಟಾಗಿರುವ ಪರಿಸ್ಥಿತಿ ಬಗ್ಗೆ  ಸಮಿತಿ ಚರ್ಚಿಸಿತು ಎನ್ನಲಾಗಿದೆ.



  ಈ ಕೆಳಗಿನ ಕ್ರಮಗಳನ್ನು ಪಾಕ್ ತೆಗೆದುಕೊಳ್ಳಲು ನಿರ್ಧರಿಸಿದೆ:


-ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದು. 
-ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು.
-ದ್ವಿಪಕ್ಷೀಯ ವ್ಯವಸ್ಥೆಗಳ ವಿಮರ್ಶೆ.
-ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಗೆ ಕರೆದೊಯ್ಯಬೇಕಾದ ವಿಷಯ.
-ಆಗಸ್ಟ್ 14ನ್ನು ಕಾಶ್ಮೀರಿ ಧೈರ್ಯಶಾಲಿಗಳಬೆಂಬಲಿಸಿ ಆಚರಿಸಲು ನಿರ್ಧಾರ. 


ಈಗ ಕಾಶ್ಮೀರ ಕ್ರಮವು ಗಂಭೀರ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಂತರ ಮಾಡಿದ ಟ್ವೀಟ್‌ನಲ್ಲಿ ಪಾಕಿಸ್ತಾನ ಸರ್ಕಾರ ಯೋಜಿಸಿರುವ ಕ್ರಮಗಳನ್ನು ವಿವರಿಸಿದೆ.ಈ ತಿಂಗಳ ಕೊನೆಯಲ್ಲಿ ಅಧಿಕಾರ ವಹಿಸಿಕೊಳ್ಳಬೇಕಿದ್ದ ಭಾರತಕ್ಕೆ ತನ್ನ ಹೈಕಮಿಷನರ್ ಹುದ್ದೆಯನ್ನು ಕಳುಹಿಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಅಲ್ಲದೆ ಪಾಕಿಸ್ತಾನದಿಂದ ಹೊರಹೋಗುವಂತೆ ಪಾಕಿಸ್ತಾನದ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಸೂಚಿಸಿದೆ ಎನ್ನಲಾಗಿದೆ.


...