ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ (Indian High Commission) ಕೆಲಸ ಮಾಡುತ್ತಿದ್ದ ಇಬ್ಬರು ಕಾಣೆಯಾದ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇಬ್ಬರೂ ಭಾರತೀಯ ರಾಯಭಾರ ಕಚೇರಿಗೆ ಮರಳಿದ್ದಾರೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಭಾರತೀಯ ಅಧಿಕಾರಿಗಳನ್ನು ಪಾಕಿಸ್ತಾನ (Pakistan) ಅಧಿಕಾರಿಗಳು ಬಂಧಿಸಿದ್ದರು ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಸ್ವಲ್ಪ ಸಮಯದ ಮೊದಲು, ಭಾರತ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ಉಪ ಹೈಕಮಿಷನರ್ ಅವರನ್ನು ಕರೆಸಿಕೊಂಡಿತ್ತು. ಈ ವಿಷಯವನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮುಂದೆ ಪ್ರಸ್ತಾಪಿಸಿತ್ತು.


ಭಾರತೀಯ ಸರ್ಕಾರದ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಪಾಕಿಸ್ತಾನದ ರಾಜತಾಂತ್ರಿಕರಿಗೆ ಪತ್ರವೊಂದನ್ನು  ಹಸ್ತಾಂತರಿಸಲಾಗಿದ್ದು, ಇದು ಭಾರತೀಯ ಅಧಿಕಾರಿಗಳಿಗೆ ಯಾವುದೇ ಪ್ರಶ್ನೆ ಅಥವಾ ಕಿರುಕುಳ ಇರಬಾರದು ಎಂದು ಸ್ಪಷ್ಟಪಡಿಸಿದೆ. ಭಾರತೀಯ ರಾಜತಾಂತ್ರಿಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಪಾಕಿಸ್ತಾನದ ಅಧಿಕಾರಿಯೂ ಹೊಂದಿರುತ್ತಾರೆ. ಪಾಕಿಸ್ತಾನ ಹೈಕಮಿಷನ್‌ನ್ನು ಕೂಡಲೇ ಹೈಕಮಿಷನ್‌ಗೆ ಕಳುಹಿಸುವಂತೆ ಉಭಯ ಅಧಿಕಾರಿಗಳಿಗೆ  ಎಂದು ಸಂಬಂಧಿತ ಪತ್ರದಲ್ಲಿ ಸೂಚಿಸಲಾಯಿತು.


ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಚಾರ:
ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರತದ ಅಧಿಕಾರಿಗಳು ಹಿಟ್ ಅಂಡ್ ರನ್ ನಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಅಪಪ್ರಚಾರ ನಡೆಯುತ್ತಿದೆ.