ನವದೆಹಲಿ: ಲಾಹೋರ್‌ನಿಂದ  ಬಂದ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನವು ಕರಾಚಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.


COMMERCIAL BREAK
SCROLL TO CONTINUE READING

ಸುಮಾರು 91 ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನವು ಏರ್‌ಬಸ್ ಎ 320 ಎಂದು ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಗಳು ತಿಳಿಸಿವೆ. ಆದರೆ ಯಾವುದೇ ಸಾವುನೋವುಗಳ ಬಗ್ಗೆ ಇನ್ನೂ ಯಾವುದೇ ವರದಿಗಳಿಲ್ಲ ಎನ್ನಲಾಗಿದೆ.



ಕರಾಚಿ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಮಾಲಿರ್‌ನ ಮಾಡೆಲ್ ಕಾಲೋನಿ ಬಳಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ - ವಸತಿ ಪ್ರದೇಶದಲ್ಲಿ ವಿಮಾನ ಇಳಿಯಿತು.



ವಿಮಾನ ಅಪಘಾತದ ನಂತರ ಅದರ ಭಗ್ನಾವಶೇಷ ಮತ್ತು ಹಲವಾರು ಮನೆಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ಪಾಕಿಸ್ತಾನ ಮಾಧ್ಯಮಗಳ ದೃಶ್ಯಗಳು ತೋರಿಸಿವೆ.