Pakistan ISI Conspiracy: ಖಲಿಸ್ತಾನ್ ಹೆಸರಿನಲ್ಲಿ ಭಾರತದ ವಿರುದ್ಧ ನಡೆಸುತ್ತಿರುವ ಪಿತೂರಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿದೆ. ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ, ISI ಏಜೆಂಟ್ ನಾಸಿರ್ ಖಾನ್ ಭಾರತದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿಗಳು ಮತ್ತು ದರೋಡೆಕೋರರೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ. ಗುಪ್ತಚರ ಮೂಲಗಳಿಂದ ಝೀ ಮೀಡಿಯಾಗೆ ದೊರೆತ ಮಾಹಿತಿಯ ಪ್ರಕಾರ, ಐಎಸ್ಐ ಏಜೆಂಟ್ ನಾಸಿರ್ ಖಾನ್ ಮೂಲಕ ವಿಶ್ವದಾದ್ಯಂತ ಭಾರತದ ವಿರುದ್ಧ ಪಿತೂರಿಯಲ್ಲಿ ತೊಡಗಿರುವ ಖಲಿಸ್ತಾನಿಗಳು ಮತ್ತು ದರೋಡೆಕೋರರಿಗೆ ಹಣದ ಜೊತೆಗೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪೂರೈಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಲಾಹೋರ್‌ನಿಂದ ಕಾರ್ಯಗತಗೊಳಿಸಲಾಗುತ್ತಿದೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಹಲವು ರಾಜ್ಯಗಳ ಪೊಲೀಸರ ತನಿಖೆಯಲ್ಲಿ, ಗಡಿಯಾಚೆಯಿಂದ ಭಾರತದಲ್ಲಿ ಇರುವ ದರೋಡೆಕೋರರು ಮತ್ತು ಕ್ರಿಮಿನಲ್‌ಗಳಿಗೆ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಭಾರತದ ವಿರುದ್ಧದ ಪಿತೂರಿಯನ್ನು ಕಾರ್ಯಗತಗೊಳಿಸಲು ಐಎಸ್‌ಐ ಲಾಹೋರ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಿದೆ.


ಭದ್ರತಾ ಏಜೆನ್ಸಿಗಳ ಮೂಲಗಳ ಪ್ರಕಾರ, ಇದುವರೆಗೆ ಸಿಕ್ಕಿಬಿದ್ದಿರುವ ಡ್ರೋನ್‌ಗಳ ಚಿಪ್ ವಿಶ್ಲೇಷಣೆಯ ಆಧಾರದ ಮೇಲೆ, ಪಾಕಿಸ್ತಾನಿ ರೇಂಜರ್‌ಗಳ ಶಿಬಿರದ ಅತ್ಯಂತ ಸಮೀಪವಿರುವ ಭಾರತೀಯ ಪ್ರದೇಶಗಳಲ್ಲಿ ಕೆಲವು ಡ್ರೋನ್‌ಗಳನ್ನು ಉಡಾಯಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಐಎಸ್‌ಐ ಇಂತಹ ಕಾರ್ಯಾಚರಣೆಗಳನ್ನು ಸಂಘಟಿಸುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ.


ಐಎಸ್‌ಐ ಮೇಲ್ವಿಚಾರಣೆಯಲ್ಲಿ ಯೋಜನೆ ರೂಪಿಸಲಾಗಿದೆ
ಸಿ


ಇದನ್ನೂ ಓದಿ-Boarder Dispute: ಭಾರತದೊಂದಿಗಿನ ಗಡಿ ವಿವಾದದಲ್ಲಿ ಹಸ್ತಕ್ಷೇಪ ಬೇಡ, ಆಸ್ಟ್ರೇಲಿಯಕ್ಕೆ ಡ್ರ್ಯಾಗನ್ ಖಡಕ್ ತಾಕೀತು!


ಪಂಜಾಬ್ ಪೊಲೀಸ್ ಮತ್ತು ಬಿಎಸ್‌ಎಫ್ ಯೋಧರಿಗೆ ಗಡಿಭಾಗದಲ್ಲಿ ದೊರೆತಿರುವ ಈ ಡ್ರೋನ್‌ಗಳಲ್ಲಿನ ಚಿಪ್‌ಗಳ ತಾಂತ್ರಿಕ ವಿಶ್ಲೇಷಣೆಯಿಂದ ಡ್ರೋನ್‌ಗಳ ಮಾರ್ಗಗಳ ಕುರಿತು ಭದ್ರತಾ ಪಡೆಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅವುಗಳ ಮಾರ್ಗವನ್ನು ಪತ್ತೆಹಚ್ಚಿದ ನಂತರ, ಅಂತಹ ಡ್ರೋನ್‌ಗಳನ್ನು ನಿಯಂತ್ರಿಸುವುದು ಬಿಎಸ್‌ಎಫ್‌ಗೆ ಮೊದಲಿಗಿಂತ ಹೆಚ್ಚು ಸುಲಭವಾಗಿದೆ.


ಇದನ್ನೂ ಓದಿ-China ದಲ್ಲಿ ನ್ಯೂ ಡೆಲ್ಲಿ ಭವನ ನಿರ್ಮಾಣ, ತಬ್ಬಿಬ್ಬಾಗಿ ನೋಡುತ್ತ ಕುಳಿತ ಪಾಕಿಸ್ತಾನ


ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕೊರತೆಯಿದೆ. ಎಲ್‌ಒಸಿ ಮತ್ತು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಅಂತರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಏಜೆನ್ಸಿಗಳ ಕಟ್ಟುನಿಟ್ಟಿನ ಜಾಗರೂಕತೆಯಿಂದ, ಭಯೋತ್ಪಾದಕರ ಕಮಾಂಡರ್‌ಗಳಿಗೆ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಸುಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಡ್ರೋನ್ ಮೂಲಕ ಭಾರತದ ಗಡಿಗೆ ಶಸ್ತ್ರಾಸ್ತ್ರ ಪೂರೈಸಲು ನಿರಂತರ ಪಿತೂರಿಗಳು ನಡೆಯುತ್ತಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.