OMG! Pakistan ದಲ್ಲಿ ಜೂಜಾಟದ ಆರೋಪದ ಮೇಲೆ ಕತ್ತೆಯನ್ನು ಬಂಧಿಸಿದ ಪೊಲೀಸರು
ಕತ್ತೆಯೊಂದು ಜೂಟಾಟದಲ್ಲಿ ತೊಡಗಿರುವುದನ್ನು ನೀವು ಎಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ?
ಕರಾಚಿ: ಜೂಜಾಟ ಆಡುವುದು ಒಂದು ಕೆಟ್ಟ ಅಭ್ಯಾಸ ಅಲ್ಲವೇ? ಜೂಜಾಟದ ಆರೋಪದ ಮೇಲೆ ಒಂದು ವೇಳೆ ಪೊಲೀಸರು ಯಾರನ್ನಾದರು ಬಂಧಿಸಿದರೆ, ಪೊಲೀಸರು ಸರಿಯಾದ್ದನ್ನೇ ಮಾಡಿದ್ದಾರೆ ಅಂತ ಜನ ಅಂದುಕೊಳ್ಳುತ್ತಾರೆ. ಈ ಕೆಟ್ಟ ಅಭ್ಯಾಸ ಎಷ್ಟು ಬೇಗ ತೊಲಗುತ್ತದೆಯೋ ಅಷ್ಟೇ ಉತ್ತಮ. ಆದರೆ, ಕತ್ತೆಯೊಂದು ಜೂಟಾಟ ಆಡುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ?
ನಿಮ್ಮ ಉತ್ತರ ಏನೇ ಇರಲಿ, ಇಂತಹ ಒಂದು ಕತ್ತೆ ಪಾಕಿಸ್ತಾನದಲ್ಲಿ ಕಂಡುಬಂದಿದೆ. ಅಲ್ಲಿನ ಪೊಲೀಸರು ಅಂತಹ ಒಂದು ಕತ್ತೆಯನ್ನು ಬಂಧಿಸಿದ್ದಾರೆ. ಈ ಕತ್ತೆ ಬಹಿರಂಗವಾಗಿ ಜೂಜಾಟ ಆಡುತ್ತದೆ ಎಂದು ಆರೋಪಿಸಲಾಗಿದೆ.
ಈ ಕತ್ತೆಯ ಬಂಧನದ ಸುದ್ದಿಯನ್ನು ಪಾಕಿಸ್ತಾನದ ಮಾಧ್ಯಮಗಳು ಜೋರಾಗಿ ತೋರಿಸುತ್ತಿವೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಈ ಕತ್ತೆ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಪ್ರದೇಶದಲ್ಲಿ ಕಂಡುಬಂದಿದ್ದು, ಪೊಲೀಸರು ಇದನ್ನು ಶನಿವಾರ ಬಂಧಿಸಿದ್ದಾರೆ. ಕತ್ತೆಯೊಂದಿಗೆ ಇತರ ಎಂಟು ಮಂದಿ ಶಂಕಿತ ವ್ಯಕ್ತಿಗಳನ್ನು ಸಹ ಬಂಧಿಸಲಾಗಿದೆ.
ತಮಾಷೆಯೆಂದರೆ, ಈ ಕತ್ತೆಯ ಹೆಸರನ್ನು ಸಹ ಎಫ್‌ಐಆರ್‌ನಲ್ಲಿ ನೋಂದಾಯಿಸಲಾಗಿದೆ. ಪಾಕಿಸ್ತಾನದ ಮಾಧ್ಯಮದಿಂದ ದೊರೆತ ಈ ವಿಡಿಯೋ ಸದ್ಯ ಭಾರಿ ವೈರಲ್ ಆಗುತ್ತಿದೆ.
ಈಗ ಜನರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುವ ಮೂಲಕ ಮಜ ತೆಗೆದುಕೊಳ್ಳುತ್ತಿದ್ದಾರೆ. ಅವರು ಮಾಡುವ ಕಾಮೆಂಟ್ ಗಳನ್ನೂ ಓದಿ ನೀವೂ ಕೂಡ ನಿಮ್ಮ ನಗು ತಡೆದುಕೊಳ್ಳುವುದು ಅಸಾಧ್ಯ. ಈ ಕುರಿತು ಬರೆದುಕೊಂಡಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆಗಾರ, "ಇದೇ ರೀತಿ ಒಂದು ವೇಳೆ ಕತ್ತೆಗಳನ್ನು ಬಂಧಿಸುತ್ತಾ ಹೋದರೆ, 'ರಿಯಾಸತ್-ಎ-ಮದೀನಾ (ಸರ್ಕಾರ) ಜಿಡಿಪಿ ಮೇಲೆ ಬಂದಿರುವ ಸಂಕಷ್ಟವನ್ನು ಶೀಘ್ರದಲ್ಲಿಯೇ ದೂರವಾಗಲಿದೆ" ಎಂದು ತಮಾಷೆ ಮಾಡಿದ್ದಾರೆ.
ಸದ್ಯ ಈ ಆರೋಪಿ ಕತ್ತೆಯನ್ನು ಪೋಲೀಸ್ ಸ್ಟೇಷನ್ ಹೊರಗಡೆ ಕಟ್ಟಿ ಹಾಕಲಾಗಿದೆ. ಹಾಗೂ ಶಂಕಿತ ಜೂಜುಕೊರರಿಂದ ಪೊಲೀಸರು ಸುಮಾರು 1 ಲಕ್ಷ 20 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.