ನವಜೋತ್ ಸಿಂಗ್ ಸಿಧು ಬೆಂಬಲಕ್ಕೆ ನಿಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್: ಇಮ್ರಾನ್ ಖಾನ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಭಾಗವಹಿಸಿದ್ಧಕ್ಕೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ.
ಈಗ ನವಜೋತ್ ಸಿಂಗ್ ಸಿದ್ದು ನೆರವಿಗೆ ಧಾವಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬೆಂಬಲವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ" ನನ್ನ ಪ್ರಮಾಣವಚನ ಕಾರ್ಯಕ್ರಮಕ್ಕೆ ಧಾವಿಸಿದ ಸಿದ್ದುಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅವರು ಶಾಂತಿಯ ರಾಯಭಾರಿ ಇದಕ್ಕೆ ಪಾಕಿಸ್ತಾನದ ಜನತೆ ಅವರಿಗೆ ಪ್ರೀತಿ ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅವರನ್ನು ಟಾರ್ಗೆಟ್ ಮಾಡುತ್ತಿರುವವರು ಉಪಖಂಡದಲ್ಲಿ ಶಾಂತಿಗೆ ಭಂಗವನ್ನು ಉಂಟುಮಾಡುತ್ತಿದ್ದಾರೆ.ಶಾಂತಿಯಿಲ್ಲದೆ ನಮ್ಮ ಜನರು ಅಭಿವೃದ್ದಿಯಾಗಲು ಸಾಧ್ಯವಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಕ್ರಿಕೆಟರುಗಳಾದ ಸುನೀಲ್ ಗವಾಸ್ಕರ್,ಕಪಿಲ್ ದೇವ್ ಮತ್ತು ನವಜೋತ್ ಸಿಂಗ್ ಸಿದ್ಧುರವರನ್ನು ಆಹ್ವಾನಿಸಿದ್ದರು.