ನವದೆಹಲಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಪ್ರಧಾನಿ ಇಮ್ರಾನ್ ಖಾನ್ ಅನುಪಸ್ಥಿತಿಯಲ್ಲಿ ದೇಶದ ಉನ್ನತ ಉದ್ಯಮಿಗಳನ್ನು ಭೇಟಿ ಮಾಡಿರುವುದು ಪಾಕಿಸ್ತಾನದಲ್ಲಿ ಮತ್ತೊಂದು ಮಿಲಿಟರಿ ಸರ್ವಾಧಿಕಾರದ ಪರ್ವ ಆರಂಭವಾಗಲಿದೆಯೇ ಎನ್ನುವ ಅನುಮಾನಗಳು ಎದುರಾಗಿವೆ.


COMMERCIAL BREAK
SCROLL TO CONTINUE READING

ಈಗ ಪಾಕಿಸ್ತಾನದಲ್ಲಿ 111 ನೇ ಕಾಲಾಳುಪಡೆ ಬ್ರಿಗೇಡಿನ ಎಲ್ಲಾ ಅಧಿಕಾರಿಗಳು ಮತ್ತು ಸೈನಿಕರ ರಜೆಗಳನ್ನು ರದ್ದುಪಡಿಸಲಾಗಿದೆ. ರಜೆ ಮೇಲಿದ್ದ ಪಾಕಿಸ್ತಾನದ ಪ್ರಧಾನಿ ಮತ್ತು ಅಧ್ಯಕ್ಷರ ಮನೆಯ ಭದ್ರತೆಯ ಜವಾಬ್ದಾರಿ ಹೊಂದಿರುವ 111ನೇ ಕಾಲಾಳುಪಡೆ ದಳದ ಅಧಿಕಾರಿಗಳು ಮತ್ತು ಸೈನಿಕರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.


ಈ ಹಿಂದೆ ಪಾಕಿಸ್ತಾನದಲ್ಲಿ 111ನೇ ಬ್ರಿಗೇಡ್ 1958, 1969, 1977 ಮತ್ತು 1999 ರ ನಾಲ್ಕು ಮಿಲಿಟರಿ ದಂಗೆಗಳಲ್ಲಿ ಅವು ಎರಡರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು. 1958 ರಲ್ಲಿ ಪಾಕಿಸ್ತಾನದ ಅಧ್ಯಕ್ಷ ಮೇಜರ್ ಜನರಲ್ (ನಿವೃತ್ತ) ಇಸ್ಕಂದರ್ ಮಿರ್ಜಾ ಅವರ ಸರ್ಕಾರವನ್ನು ವಜಾಗೊಳಿಸುವ ಮೂಲಕ ಅಧಿಕಾರವನ್ನು ವಶಪಡಿಸಿಕೊಳ್ಳಲು ಆಗಿನ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಯೂಬ್ ಖಾನ್ ಸಹಾಯ ಮಾಡಿದರು. ಸುಮಾರು 21 ವರ್ಷಗಳ ನಂತರ, ಆಗಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಜಿಯಾ-ಉಲ್-ಹಕ್ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವಿರುದ್ಧ ಮಿಲಿಟರಿ ದಂಗೆ ನಡೆಸಿದ್ದರು.


ಪಾಕಿಸ್ತಾನ ಸೇನೆಯ ಅಂತರ-ಸೇವೆಗಳ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್) ಹೇಳುವಂತೆ ದೇಶವು ಸುಧಾರಿತ ಆಂತರಿಕ ಭದ್ರತಾ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ, ಇದು ಹೆಚ್ಚಿದ ಆರ್ಥಿಕ ಚಟುವಟಿಕೆಗಳಿಗೆ ಅವಕಾಶವನ್ನು ನೀಡಲಿದೆ ಎಂದು ಜನರಲ್ ಬಜ್ವಾ ಉದ್ಯಮಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.


ರಾವಲ್ಪಿಂಡಿಯ ಸೇನಾ ಸಭಾಂಗಣದಲ್ಲಿ ಆಯೋಜಿಸಲಾದ ಇಂಟರ್ಪ್ಲೇ ಆಫ್ ಎಕಾನಮಿ ಅಂಡ್ ಸೆಕ್ಯುರಿಟಿ ಎಂಬ ವಿಚಾರ ಸಂಕಿರಣದಲ್ಲಿ ಜನರಲ್ ಬಜ್ವಾ ಅವರು ವ್ಯಾಪಾರ ಉದ್ಯಮಿಗಳನ್ನು ಮತ್ತು ಆರ್ಥಿಕತೆಯೊಂದಿಗೆ ವ್ಯವಹರಿಸುವ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದರು. ಇಮ್ರಾನ್ ಖಾನ್ ಅನುಪಸ್ಥಿತಿಯಲ್ಲಿ ಉದ್ಯಮಿಗಳೊಂದಿಗಿನ ಅವರ ಭೇಟಿಯು ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಪಾರಮ್ಯ ಮೆರೆಯಲಿದೆ ಎನ್ನುವ ಸಂಶಯ ವ್ಯಕ್ತವಾಗಿದೆ.


ಈಗ ಭಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ ಸೌದಿ ಅರೇಬಿಯಾ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಸಹಾಯ ಹಸ್ತವನ್ನು ಚಾಚಿದೆ.