ನವದೆಹಲಿ: ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವದ ಅಗ್ರ ವೇದಿಕೆಯಲ್ಲಿ ಅಂದರೆ ವಿಶ್ವಸಂಸ್ಥೆಯಲ್ಲಿ ದನಿ ಎತ್ತಿದ್ದು, ಮತ್ತೆ ಸೋಲು ಅನುಭವಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಈ ವಿಷಯವನ್ನು ಎತ್ತಲು ಚೀನಾ ಮಂಡಿಸಿದ ಪ್ರಸ್ತಾಪವನ್ನು ವಿಶ್ವದ 10 ಪ್ರಬಲ ದೇಶಗಳು ತಿರಸ್ಕರಿಸಿದ್ದು, ಈಗ ಮತ್ತೆ ಈ ವಿಷಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಯುಎನ್‌ಎಸ್‌ಸಿಯಲ್ಲಿ ಅನ್ನಿ ಅದರ್ ಬ್ಯುಸಿನೆಸ್ (AOB) ಅಡಿಯಲ್ಲಿ ಪಾಕಿಸ್ತಾನದ ಮನವಿಯ ಕುರಿತು ಚೀನಾ ಕಾಶ್ಮೀರ ವಿಷಯದ ಕುರಿತು ಕ್ಲೋಸ್ ಡೋರ್ ಸಭೆಯನ್ನು ಪ್ರಸ್ತಾಪಿಸಿತ್ತು.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಕಳೆದ ವರ್ಷ ಈ ಪ್ರಸ್ತಾಪಕ್ಕಾಗಿ ಡಿಸೆಂಬರ್ 24 ರ ದಿನಾಂಕವನ್ನು ನಿಗದಿಪಡಿಸಲಾಗಿತ್ತು, ಆದರೆ ಕೆಲವು ಕಾರಣಗಳಿಂದಾಗಿ ಈ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಈ ಪ್ರಸ್ತಾಪವನ್ನು ಯುಎನ್‌ಎಸ್‌ಸಿ, ಫ್ರಾನ್ಸ್, ಯುಎಸ್, ಯುಕೆ ಮತ್ತು ರಷ್ಯಾದ ಖಾಯಂ ಸದಸ್ಯರು ಸೇರಿದಂತೆ 10 ಸದಸ್ಯರು ವಿರೋಧಿಸಿದರು ಮತ್ತು ಈ ವಿಷಯವನ್ನು ಇಲ್ಲಿ ಎತ್ತುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ರೀತಿಯಾಗಿ, ಚೀನಾ ಮೂಲಕ ವಿಷಯ ಪ್ರಸ್ತಾಪಿಸಿದ್ದ ಪಾಕಿಸ್ತಾನ ಮತ್ತೆ ವಿಫಲವಾಗಿದೆ. 


ಯುಎನ್‌ನ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ನಾವು ಆಶಿಸಿದ್ದು ಈಗ ಸಂಭವಿಸಿದೆ. ಇಂದು, ಯುಎನ್ ನಲ್ಲಿ ಪಾಕಿಸ್ತಾನದ ಸುಳ್ಳು ಹಕ್ಕುಗಳು ಬಹಿರಂಗಗೊಂಡಿವೆ. ನಮ್ಮ ಅನೇಕ ಸ್ನೇಹಿತರು ನಮ್ಮನ್ನು ಬೆಂಬಲಿಸಿದರು ಮತ್ತು ಇದು ದ್ವಿಪಕ್ಷೀಯ ವಿಷಯ ಎಂದು ಹೇಳಿದ್ದಕ್ಕೆ ನಮಗೆ ಸಂತೋಷವಾಗಿದೆ. ತನ್ನ ನ್ಯೂನತೆಗಳನ್ನು ಮರೆಮಾಡಲು ಪಾಕಿಸ್ತಾನಕ್ಕೆ ಸುಳ್ಳು ಹೇಳುವ ಚಾಳಿ ಇಂದು ಕೊನೆಗೊಂಡಿದೆ. ಪಾಕಿಸ್ತಾನವು ಇನ್ನು ಮುಂದೆಯಾದರೂ ಬುದ್ದಿ ಕಲಿಯುತ್ತದೆ ಮತ್ತು ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ ಎಂದವರು ಹೇಳಿದರು.