ಭಯೋತ್ಪಾದಕ ಗುಂಪುಗಳನ್ನು ಎದುರಿಸಲು ಪಾಕಿಸ್ತಾನ ಮುಂದೆ ಬರಲಿದೆ : ಅಮೇರಿಕಾ ವಿಶ್ವಾಸ
ಅಮೆರಿಕ 2 ಬಿಲಿಯನ್ ಡಾಲರ್ ನೆರವು ಸ್ಥಗಿತಗೊಳಿಸಿರುವುದು ಪಾಕಿಸ್ತಾನವನ್ನು ಕೆರಳಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೆರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ವಾಷಿಂಗ್ಟನ್: ಇಸ್ಲಾಮಾಬಾದ್ ತನ್ನ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಅಮೆರಿಕದೊಂದಿಗೆ ಸ್ಥಗಿತಗೊಳಿಸಿದೆ ಎಂಬ ವರದಿಗಳ ನಡುವೆ, ಪಾಕಿಸ್ತಾನವು ಅದರ ಪ್ರಾಂತ್ಯದಿಂದ ಕಾರ್ಯನಿರ್ವಹಿಸುವ ಭಯೋತ್ಪಾದಕ ಗುಂಪುಗಳನ್ನು "ಆಕ್ರಮಣಕಾರಿಯಾಗಿ" ಎದುರಿಸಲು ಇಚ್ಛೆ ತೋರಲಿದೆ ಎಂದು ಯುಎಸ್ ವಿಶ್ವಾಸ ವ್ಯಕ್ತಪಡಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ 2 ಬಿಲಿಯನ್ ಡಾಲರ್ ನೆರವು ಸ್ಥಗಿತಗೊಳಿಸಿರುವುದು ಪಾಕಿಸ್ತಾನವನ್ನು ಕೆರಳಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಅಮೆರಿಕಾಗೆ ಗುಪ್ತಚರ ಹಾಗೂ ರಕ್ಷಣಾ ಸಹಕಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಯು.ಎಸ್ ರಾಜ್ಯ ಅಧೀನ ಕಾರ್ಯದರ್ಶಿ ಸ್ಟೀವ್ ಗೋಲ್ಡ್ಸ್ಟೆನ್ "ಭವಿಷ್ಯದಲ್ಲಿ ಪಾಕಿಸ್ತಾನ ಸಹಕಾರ ನೀಡುವುದಾಗಿ ನಾನು ವಿಶ್ವಾಸ ಹೊಂದಿದ್ದೀವೆ" ಎಂದಿದ್ದಾರೆ.
"ಎಲ್ಲ ರೀತಿಯ ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸಲು ನಾವು ಪಾಕಿಸ್ತಾನದೊಂದಿಗೆ ಯಾವುದೇ ಭಿನಾಭಿಪ್ರಾಯವಿಲ್ಲದೆ ಸದಾ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ. ಹಾಗೆಯೇ ತಾಲಿಬಾನ್ ನೆಟ್ವರ್ಕ್, ಹಕ್ಕಾನಿ ನೆಟ್ವರ್ಕ್ ಮತ್ತು ಇತರ ಭಯೋತ್ಪಾದಕ ಮತ್ತು ಉಗ್ರಗಾಮಿಗಳನ್ನು ಆಕ್ರಮಣಕಾರಿ ರೀತಿಯಲ್ಲಿ ಎದುರಿಸಲು ಪಾಕಿಸ್ತಾನ ತನ್ನ ಇಚ್ಛೆಯನ್ನು ಪ್ರದರ್ಶಿಸಿದಾಗ ನಮ್ಮ ದ್ವಿಪಕ್ಷೀಯ ಭದ್ರತಾ ಸಂಬಂಧವನ್ನು ನವೀಕರಿಸಲು ಮತ್ತು ಬಲಿಷ್ಠಗೊಳಿಸಲು ನಾವು ಸಿದ್ಧರಿದ್ದೇವೆ" ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ಅಮೇರಿಕ ಸ್ಪಷ್ಟವಾಗಿದೆ ಎಂದು ಸ್ಟೀವನ್ ಹೇಳಿದ್ದಾರೆ.
"ಪಾಕಿಸ್ತಾನವು ನಮ್ಮ ಬಳಿಗೆ ಬಂದು ಈ ಪ್ರಯತ್ನದಲ್ಲಿ ನಮಗೆ ಸಹಾಯ ಮಾಡಬೇಕೆಂದು ನಾವು ಬಯಸುತ್ತೇವೆ" ಎಂದ ಅವರು ಭದ್ರತಾ ನೆರವು ಅಮಾನತುಗೊಳಿಸುವುದನ್ನು ಕಡಿತಗೊಳಿಸುವುದಿಲ್ಲ ಮತ್ತು ಯಾವುದೇ ಹಣವನ್ನು ಮರುಯೋಜನೆ ಗೊಳಿಸುವುದಿಲ್ಲ ಎಂದು ಹೇಳಿದರು.
ಯುಎಸ್ ಮಿಲಿಟರಿ ಉಪಕರಣಗಳನ್ನು ವಿತರಿಸುವುದಿಲ್ಲ ಅಥವಾ ಭದ್ರತಾ-ಸಂಬಂಧಿತ ನಿಧಿಗಳನ್ನು ಪಾಕಿಸ್ತಾನಕ್ಕೆ ವರ್ಗಾಯಿಸುವುದಿಲ್ಲ ಎಂದು ಗುರುವಾರ ಘೋಷಿಸಿತ್ತು.