Pakistan On Chandrayaan 3 : ಭಾರತದ ಬಹುದಿನದ ಕನಸು ಚಂದ್ರಯಾನ 3 ನಿನ್ನೆ ಯಶಸ್ವಿಯಾಗಿದೆ. ಇಸ್ರೋ ಅದ್ಭುತ ಮೈಲಿಗಲ್ಲನ್ನು ಸ್ಥಾಪಿಸಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಿರುವಾಗ ಎದುರಾಳಿ ರಾಷ್ಟ್ರ ಪಾಕಿಸ್ತಾನದ ಸೆಲೆಬ್ರಿಟಿಗಳೂ ಭಾರತವನ್ನು ಹೊಗಳುತ್ತಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಅವರ ಸಹವರ್ತಿ ಮತ್ತು ಮಾಜಿ ಸಚಿವ ಫಹದ್ ಚಂದ್ರಯಾನ 3 ಅನ್ನು ತಮ್ಮ ದೇಶದಲ್ಲಿ ನೇರ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು. ಇದೀಗ ಖ್ಯಾತ ಪಾಕಿಸ್ತಾನಿ ನಟಿಯ ಕಾಮೆಂಟ್‌ಗಳು ಸಂಚಲನ ಸೃಷ್ಟಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತವು ಶೀಘ್ರದಲ್ಲೇ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ: ಪ್ರಧಾನಿ ಮೋದಿ 


ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಇಡೀ ವಿಶ್ವವೇ ಶ್ಲಾಘಿಸುತ್ತಿದೆ. ಪಾಕಿಸ್ತಾನಿ ನಟಿ ಸೆಹರ್ ಶಿನ್ವಾಲಿ ಅವರು ಚಂದ್ರಯಾನ 3 ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು ಮತ್ತು ಭಾರತಕ್ಕೆ ಶುಭ ಹಾರೈಸಿದರು. ಅಲ್ಲದೇ, ತನ್ನ ದೇಶವನ್ನು ತೀವ್ರವಾಗಿ ಟೀಕಿಸಿದ್ದಾರೆ. ಭಾರತದೊಂದಿಗಿನ ದ್ವೇಷವನ್ನು ಬದಿಗಿಟ್ಟು ಇಸ್ರೋಗೆ ಅಭಿನಂದನೆ ಸಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಭಾರತ ಸರ್ಕಾರದ ನೆರವಿನಿಂದ ಇಸ್ರೋ ವಿಜ್ಞಾನಿಗಳಿಗೆ ಇದು ಸಾಧ್ಯವಾಗಿದೆ ಎಂದಿದ್ದಾರೆ. ಪಾಕಿಸ್ತಾನಕ್ಕೆ ಭಾರತದ ಮಟ್ಟ ತಲುಪಲು ಸಾಧ್ಯವೇ ಇಲ್ಲ. ಭಾರತ ಎಷ್ಟು ಎತ್ತರಕ್ಕೆ ಏರಿದೆ ಎಂಬುದನ್ನು ನೋಡಿ ಪಾಕಿಸ್ತಾನ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. 


 


ಬಾಹ್ಯಾಕಾಶಕ್ಕೆ ಹೋಗುವ ಎಲ್ಲಾ ರಾಕೆಟ್‌ಗಳು ಏಕೆ ಬಿಳಿಯಾಗಿರುತ್ತವೆ.? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.