Kathmandu Airport Plane Crash News: ಸೌರ್ಯ ಏರ್‌ಲೈನ್ಸ್‌ನ ವಿಮಾನವು ಬುಧವಾರ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಪತನಗೊಂಡಿದೆ.ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 19 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ ಘಟನೆಯಲ್ಲಿ  18 ಮಂದಿ ಮೃತಪಟ್ಟಿದ್ದಾರೆ. ೧೮ ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. 


COMMERCIAL BREAK
SCROLL TO CONTINUE READING

ಪೋಖರಾಗೆ ತೆರಳುತ್ತಿದ್ದ ವಿಮಾನವು ಟೇಕ್ ಆಫ್ ಆಗುವಾಗ  ಅವಘಡ ಸಂಭವಿಸಿದೆ ಎಂದು ಟಿಐಎ ವಕ್ತಾರರು ತಿಳಿಸಿದ್ದಾರೆ.ಕ್ಯಾಪ್ಟನ್ ಎಂಆರ್ ಶಾಕ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 


ಇದನ್ನೂ ಓದಿ : ವಿಶ್ವದ ಈ 5 ಅಪಾಯಕಾರಿ ಸ್ಥಳಗಳಿಂದ ಹಿಂತಿರುಗುವುದು ಅಸಾಧ್ಯ..!


ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ಚಿತ್ರಗಳು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದು.ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. 


ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು? : 
ವಿಮಾನವು ರನ್‌ವೇಯ ದಕ್ಷಿಣ ತುದಿಯಿಂದ ಟೇಕ್ ಆಫ್ ಆಗುತ್ತಿತ್ತು. ಟೇಕ್ ಆಫ್ ಆಗುತ್ತಿದ್ದಂತೆಯೇ ಕೆಳಗಿಳಿಯಲು ಆರಂಭಿಸಿತು. ಹೀಗಾಗುತ್ತಿದ್ದಂತೆಯೇ ವಿಮಾನದ ರೆಕ್ಕೆಯ ತುದಿ ನೆಲಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.ತಕ್ಷಣವೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ. ಇದರ ನಂತರ ಅದು ಬುದ್ಧ ಏರ್ ಹ್ಯಾಂಗರ್ ಮತ್ತು ರನ್‌ವೇಯ ಪೂರ್ವ ಭಾಗದಲ್ಲಿರುವ ಕಂದಕಕ್ಕೆ ವಿಮಾನ ಬಿದ್ದಿದೆ.  


ಇದನ್ನೂ ಓದಿ : ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ