ರನ್ ವೇ ಬದಲಿಗೆ ಸಮುದ್ರದಲ್ಲಿ ಲ್ಯಾಂಡ್ ಆದ ವಿಮಾನ ಮುಂದೇನಾಯ್ತು, ವೀಡಿಯೊ ನೋಡಿ
ಸಮುದ್ರದಲ್ಲಿ ಬಹಳ ದೂರದವರೆಗೆ ಸಾಗಿದ್ದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲು ಅಧಿಕಾರಿಗಳು ಪ್ರಯತ್ನಿಸಿದರು.
ನವದೆಹಲಿ: ವಿಮಾನಗಳು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾದ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಆದರೆ ಗುರುವಾರ ಪೆಸಿಫಿಕ್ ಓಷನ್ ನ ಪಪುವ ನ್ಯೂ ಗಿನಿಯಾದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ವಾಸ್ತವವಾಗಿ, ಮೈಕ್ರೋನೆಶಿಯಾದ ವಿಮಾನ ನಿಲ್ದಾಣವೊಂದರಲ್ಲಿ ಲ್ಯಾಂಡ್ ಆಗುತ್ತಿದ್ದ ವಿಮಾನ ರನ್ ಬಳಿ ತೆರಳುತ್ತಿತ್ತು. ಆ ಸಮಯದಲ್ಲಿ ನಿಯಂತ್ರಣ ತಪ್ಪಿ ಹತ್ತಿರದ ಸಮುದ್ರ ಪ್ರವೇಶಿಸಿದೆ. ರಾಯ್ಟರ್ಸ್ ವರದಿಯ ಪ್ರಕಾರ, ವಿಮಾನವು ರನ್ ವೇ ಬದಲಿಗೆ ಸುಮಾರು 160 ಮೀಟರ್ಗಳಷ್ಟು ಸಮುದ್ರದೊಳಗೆ ಹೋಯಿತು.
ಎಲ್ಲಾ ಪ್ರಯಾಣಿಕರೂ ಸುರಕ್ಷಿತ:
ರನ್ ವೇ ಬದಲಿಗೆ ಸುಮಾರು 160 ಮೀಟರ್ಗಳಷ್ಟು ಸಮುದ್ರದೊಳಗೆ ಸಾಗಿದ ವಿಮಾನವನ್ನು ಗಮನಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ವಿಮಾನದಲ್ಲಿದ್ದವರೆಲ್ಲರನ್ನೂ ರಕ್ಷಿಸಿದ್ದಾರೆ. ವಿಮಾನದಲ್ಲಿ ಸುಮಾರು 36 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು. ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕೃತವಾಗಿ ಹೇಳಿದ್ದಾರೆ.
ನೀವು ಸಹ ವೀಡಿಯೊವನ್ನು ನೋಡಿ ...
ವಿಮಾನವು ಬೆಳಿಗ್ಗೆ 09:30 ಕ್ಕೆ ಇಳಿಯಬೇಕಾಯಿತು, ಲ್ಯಾಂಡಿಂಗ್ ಆಗುತ್ತಿತ್ತು. ಆದರೆ ಅದು ರನ್ ವೇ ನಲ್ಲಿ ನಿಲ್ಲಲೇ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದೇ ಸಮಯದಲ್ಲಿ, ವಿಮಾನವು ನೇರವಾಗಿ ಸಮುದ್ರಕ್ಕೆ ಹೋಗಿ ನಿಂತಿತು ಎಂದು ಅವರು ತಿಳಿಸಿದರು. ಆ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲಾ ಗಾಬರಿಯಾಗಿದ್ದರು. ನಂತರ ಅಧಿಕಾರಿಗಳು ಅವರನ್ನು ರಕ್ಷಿಸಲು ಬಂದಾಗ ಅವರು ನಿಟ್ಟುಸಿರು ಬಿಟ್ಟರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಇಳಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ 36 ಪ್ರಯಾಣಿಕರು ಮತ್ತು 11 ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾರಿಗೂ ಯಾವುದೇ ಗಂಭೀರ ಗಾಯಗಳಿಲ್ಲ. ಅಪಘಾತದ ಕಾರಣ ತಿಳಿದಿಲ್ಲ ಎಂದು ಎಮಿಲಿಯೊ ಹೇಳಿದರು. ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳಲ್ಲಿ ಸ್ಥಳೀಯ ಜನರು ದೋಣಿಯಿಂದ ಪ್ರಯಾಣಿಸುವ ಪ್ರಯಾಣಿಕರನ್ನು ತೋರಿಸುತ್ತಿದ್ದಾರೆ.