ಹಾಂಗ್ ಕಾಂಗ್ಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರೇ ದಯವಿಟ್ಟು ಗಮನಿಸಿ!
ಹಾಂಗ್ ಕಾಂಗ್ಗೆ ತೆರಳಿ ಅಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರಿಗೆ ಭಾರತ ಸಲಹೆ ನೀಡಿದೆ.
ಹಾಂಗ್ ಕಾಂಗ್: ಸಾವಿರಾರು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರು ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಅಧಿಕಾರಿಗಳು ಸೋಮವಾರ ನಗರದ ಹೊರಗಿನ ಎಲ್ಲಾ ವಿಮಾನಗಳನ್ನು ಪೂರ್ಣ ದಿನದವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ಪ್ರತಿಭಟನೆ ಮಂಗಳವಾರ ತೀವ್ರ ಸ್ವರೂಪ ಪಡೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್‌ನಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಭಾರತ ಸಲಹೆ ನೀಡಿದೆ.
ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿ ತಿಳಿಯಾಗುವವರೆಗೆ, ಭಾರತೀಯ ಪ್ರಯಾಣಿಕರು ಅನಾನುಕೂಲತೆಯನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಈಗಾಗಲೇ ಹಾಂಗ್ ಕಾಂಗ್‌ನಲ್ಲಿರುವ ಮತ್ತು ಭಾರತಕ್ಕೆ ಬರಲು ಕಾಯುತ್ತಿರುವ ಭಾರತೀಯರು, ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರಿ. ಯಾವುದೇ ಸಮಸ್ಯೆಗೆ, ಭಾರತದ ರಾಯಭಾರ ಕಚೇರಿಯನ್ನು +852 90771083 ಗೆ ಸಂಪರ್ಕಿಸಿ ಎಂದು ನಿರ್ದೇಶಿಸಲಾಗಿದೆ.
ಸತತ ನಾಲ್ಕನೇ ದಿನವೂ ಹಾಂಗ್ ಕಾಂಗ್‌ನಲ್ಲಿ ಮುಂದುವರೆದ ಪ್ರತಿಭಟನೆ:
ಅಲ್ಲಿನ ಜನರು ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದು, ಈ ಕಾರಣದಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾದ ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸತತ ನಾಲ್ಕನೇ ದಿನವೂ ಪ್ರತಿಭಟನೆಗಳು ಮುಂದುವರೆದವು. ವಿಮಾನ ನಿಲ್ದಾಣ ಪ್ರಾಧಿಕಾರ ಸೋಮವಾರ ಮಧ್ಯಾಹ್ನ ಎರಡು ಗಂಟೆಯ ನಂತರ ವಿಮಾನ ನಿಲ್ದಾಣದ ಭದ್ರತೆಯನ್ನು ಬಿಗಿಗೊಳಿಸಿತು.
ಟರ್ಮಿನಲ್ 1 ರ ನಿರ್ಗಮನ ಸಭಾಂಗಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಒಂದು ಗಂಟೆಯ ನಂತರ, ಸಾವಿರಾರು ಪ್ರತಿಭಟನಾಕಾರರು ಸಭಾಂಗಣದಲ್ಲಿ ಜಮಾಯಿಸಿ ಅಲ್ಲಿಯೇ ಕುಳಿತರು. ಭಾನುವಾರ, ಸಿಮ್ ಶಾ ತ್ಸುಯಿ, ಶಾಮ್ ಶೂಯಿ ಪೊ, ಕ್ವೇ ಚುಂಗ್ ಮತ್ತು ಕಾಸ್‌ವೇ ಕೊಲ್ಲಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿರುವ ಘಟನೆಗಳು ಕಂಡುಬಂದವು.